ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 27 JULY 2024 : ತುಂಗಾ ಜಲಾಶಯದಿಂದ (Dam) ಅಪಾರ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಹಾಗಾಗಿ ತುಂಗಾ ನದಿ ತೀರದ ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗಾಜನೂರಿನ ತುಂಗಾ ಜಲಾಶಯದಿಂದ ಪ್ರಸ್ತುತ 84,003 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ನದಿ ದಂಡೆ ಪಕ್ಕದ ಪ್ರದೇಶಗಳಿಗೆ ನೀರು ನುಗ್ಗಿದೆ.
ರಸ್ತೆ ಮೇಲೆ ಹರಿದ ತುಂಗೆ
ನ್ಯೂ ಮಂಡ್ಲಿ ಬಳಿ ತುಂಗಾ ನದಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಕ್ಕಪಕ್ಕದ ಜಮೀನು, ದೇವಸ್ಥಾನ ಜಲಾವೃತವಾಗಿದೆ. ರಸ್ತೆ ಮೇಲೆ ನೀರು ನಿಂತಿರುವುದರಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ.
ಜನರಲ್ಲಿ ನೆರೆ ಭೀತಿ
ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದಂತೆ ನದಿ ದಂಡೆ ಮೇಲಿನ ಮನೆಗಳು, ಕಟ್ಟಡಗಳ ನಿವಾಸಿಗಳಲ್ಲಿ ಭೀತಿ ಉಂಟಾಗಿದೆ. ಹೊಸಹಳ್ಳಿ, ಸವಾಯಿಪಾಳ್ಯ, ಮದಾರಿಪಾಳ್ಯ, ನ್ಯೂ ಮಂಡ್ಲಿ, ಸೀಗೆಹಟ್ಟಿ ಭಾಗದಲ್ಲಿ ನೀರು ನುಗ್ಗುವ ಭಯ ಆವರಿಸಿದೆ. ಮದಾರಿ ಪಾಳ್ಯದಲ್ಲಿ ಮಸೀದಿಯ ಹಿಂಭಾಗದಲ್ಲಿ ಈಗಾಗಲೇ ಶೌಚಾಲಯ ಕೊಚ್ಚಿ ಹೋಗಿದ್ದು ಮತ್ತಷ್ಟು ಮಣ್ಣು ಕುಸಿಯುವ ಆತಂಕವಿದೆ.
ಇದನ್ನೂ ಓದಿ ⇓
ತುಂಗಾ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ, ಭರ್ತಿಯ ಸನಿಹಕ್ಕೆ ಭದ್ರಾ, ಲಿಂಗನಮಕ್ಕಿ, ಎಷ್ಟಿದೆ ಒಳ ಹರಿವು?