DAM LEVEL, 29 JULY 2024 : ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಹಾಗಾಗಿ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಪ್ರಮಾಣ ತಗ್ಗಿದೆ. ಇವತ್ತು ಯಾವ್ಯಾವ ಜಲಾಶಯದ ಒಳ ಹರಿವು ಎಷ್ಟಿದೆ?
[su_note note_color=”#EBEDEF” text_color=”#000000″ radius=”1″]ಲಿಂಗನಮಕ್ಕಿ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಇವತ್ತು 40,382 ಕ್ಯೂಸೆಕ್ ಒಳ ಹರಿವು ಇದೆ. 3,815 ಕ್ಯೂಸೆಕ್ ಹೊರ ಹರಿವು ಇದೆ. ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಈವರೆಗೂ 1809.15 ಅಡಿಯಷ್ಟು ನೀರು ಸಂಗ್ರಹವಾಗಿದೆ. ಒಟ್ಟು 151.64 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 120.45 ಟಿಎಂಸಿ ನೀರು ಭರ್ತಿಯಾಗಿದೆ. [/su_note]
[su_note note_color=”#EBEDEF” text_color=”#000000″ radius=”1″]ತುಂಗಾ ಜಲಾಶಯದ ಒಳ ಮತ್ತು ಹೊರ ಹರಿವು ತಗ್ಗಿದೆ. ಇವತ್ತು 38,086 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಳವಾದರೆ ಒಳ ಹರಿವು ಮತ್ತಷ್ಟು ಏರಿಕೆಯಾಗಲಿದೆ.[/su_note]
[su_note note_color=”#EBEDEF” text_color=”#000000″ radius=”1″]ಭದ್ರಾ ಜಲಾಶಯದ ಒಳ ಹರಿವು ಕೂಡ ಕುಸಿತ ಕಂಡಿದೆ. ಇವತ್ತು 18,381 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. 962 ಕ್ಯೂಸೆಕ್ ಹೊರ ಹರಿವು ಇದೆ. ಜಲಾಶಯದ ಗರಿಷ್ಠ ನೀರು ಸಂಗ್ರಹ ಮಟ್ಟ 186 ಅಡಿ. ಈವರೆಗೆ 181.10 ಅಡಿಯಷ್ಟು ನೀರು ಸಂಗ್ರಹವಾಗಿದೆ.[/su_note]



