ಶಿವಮೊಗ್ಗ ಜೈಲಿನ ಸಿಸಿಟಿವಿಯಲ್ಲಿ ಕಾಣಿಸ್ತು ಬಣ್ಣ ಬಣ್ಣ ವಸ್ತು, ದಾಖಲಾಯ್ತು ದೂರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA, 1 AUGUST 2024 : ಶಿವಮೊಗ್ಗ ಸೆಂಟ್ರಲ್‌ ಜೈಲಿನಲ್ಲಿ (Jail) ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಸಿಸಿಟಿವಿಯಲ್ಲಿ ಜೈಲ್‌ ಆವರಣದ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಕಪ್ಪು, ಹಸಿರು ಮತ್ತು ನೀಲಿ ಬಣ್ಣದ ಗಮ್‌ ಪಟ್ಟಿಯನ್ನು ಸುತ್ತಿರುವ ವಸ್ತು ಪತ್ತೆಯಾಗಿದೆ.

ಜೈಲಿನ ಕುಮದ್ವತಿ ವಿಭಾಗದ ಕೊಠಡಿಯೊಂದರ ಹಿಂಭಾಗದಲ್ಲಿ ಗಮ್‌ ಪಟ್ಟಿ ಸುತ್ತಿರುವ ನಾಲ್ಕು ವಸ್ತುಗಳು ಪತ್ತೆಯಾಗಿವೆ. ಸಿಸಿಟಿವಿ ಕರ್ತವ್ಯ ನಿರತ ಸಿಬ್ಬಂದಿ ಈ ವಿಚಾರವನ್ನು ಜೈಲು ಅಡಳಿತ ಮಂಡಳಿಗೆ ತಿಳಿಸಿದ್ದಾರೆ.

Shimoga-Central-Jail-Building

ಜೈಲು ಸುತ್ತಲು ಕೆಎಸ್‌ಐಎಸ್‌ಎಫ್‌ ಭದ್ರತಾ ಪಡೆ ನಿಯೋಜನೆ ಮಾಡಿದ್ದರೂ ಕಾಂಪೌಂಡ್‌ನ ಹೊರಗಿನಿಂದ ಈ ವಸ್ತುಗಳನ್ನು ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ⇓

ಮಂಜುನಾಥಗೌಡ ಸೇರಿ ಘಟಾನುಘಟಿಗಳಿಂದ ನಾಮಪತ್ರ ಸಲ್ಲಿಕೆ, ಹಾಲು ಒಕ್ಕೂಟದ ಚುನಾವಣೆಗೆ ಯಾರೆಲ್ಲ ಸ್ಪರ್ಧಿಸಿದ್ದಾರೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 1, 2024

Leave a Comment