ಸಕ್ರೆಬೈಲಿನ ಸಲಗಕ್ಕೆ ಆನೆ ದಿನದಂದು ನಾಮಕರಣ, ಏನಂತ ಹೆಸರಿಡಲಾಯ್ತು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA, 13 AUGUST 2024 : ವಿಶ್ವ ಆನೆ ದಿನಾಚರಣೆ ಶುಭ ಸಂದರ್ಭದಲ್ಲಿ ಶಿವಮೊಗ್ಗ ಸಕ್ರೇಬೈಲು ಆನೆ ಬಿಡಾರದಲ್ಲಿ (Camp) ಸಲಗವೊಂದಕ್ಕೆ ಶಾಸ್ರೋಕ್ತವಾಗಿ ನಾಮಕರಣ ಮಾಡಲಾಯಿತು.

2023ನೇ ನವೆಂಬ‌ರ್ 16ರಂದು ಮೂಡಿಗೆರೆ ತಾಲೂಕು ಆಲ್ಲೂರು ಅರಣ್ಯ ವ್ಯಾಪ್ತಿಯಲ್ಲಿ ಸೆರೆ ಸಿಕ್ಕ ಕಾಡಾನೆಯನ್ನು ಶಿಬಿರದಲ್ಲಿ ಪಳಗಿಸಲಾಗಿತ್ತು. ಅಲ್ಪಾವಧಿಯಲ್ಲೆ ಈ ಸಲಗ ಶಿಬಿರದ ಮೆಚ್ಚಿನ ಊರಾನೆಯಾಗಿ ಬದಲಾಗಿದೆ. ಮಾವುತರು ಮತ್ತು ಕಾವಾಡಿಗಳಿಗೆ ವಿಧೇಯನಾಗಿದ್ದ ಸಲಗಕ್ಕೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿ ಕಾರಿಗಳು ‘ಅಶ್ವತ್ಥಾಮ’ ಹೆಸರಿಟ್ಟರು.

ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಅಗ್ನಿವೀರರ ನೇಮಕಾತಿ ರ‍್ಯಾಲಿ, ಯಾವೆಲ್ಲ ಜಿಲ್ಲೆಯವರಿಗೆ ಇರಲಿದೆ ಅವಕಾಶ?

ಸೋಮವಾರ ಬೆಳಗ್ಗೆ ಬಿಡಾರದಲ್ಲಿ ಪುರೋಹಿತ ಮಧು ಭಟ್ ಮಂತ್ರ ಘೋಷಣೆ ಮಾಡಿದರೆ, ವನ್ಯ ಜೀವಿ ವಿಭಾಗದ ಡಿಎಫ್‌ಒ ಪ್ರಸನ್ನಕೃಷ್ಣ ಪಟಗಾರ್ ಅವರು ಸಲಗದ ಕಿವಿಯಲ್ಲಿ ಮೂರು ಬಾರಿ ಅಶ್ವತ್ಥಾಮ ಎಂದು ಕೂಗುವ ಮೂಲಕ ನಾಮಕರಣ ಮಾಡಿದರು. ಬಿಡಾರದಲ್ಲಿ ಈಗ ಮೂರು ಮರಿ ಸೇರಿ 23 ಆನೆಗಳಿವೆ.

sakrebyle-elephant-named-after-ashwathama

ಇದನ್ನೂ ಓದಿ ⇒ ಪುರದಾಳು ರಸ್ತೆಯಲ್ಲಿ ಅಪಘಾತ, ಮಹಿಳೆಯ ಎರಡು ಕಾಲಿನ ಮೂಳೆ ಕಟ್‌ – ಇಲ್ಲಿದೆ 3 ಫಟಾಫಟ್‌ ನ್ಯೂಸ್‌

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment