ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA, 13 AUGUST 2024 : ಮೈಕ್ರೋ ಫೈನಾನ್ಸ್ಗಳು (Micro Finance) ಜಿಲ್ಲೆಯ ಬಡ ಮಹಿಳೆಯರನ್ನು ಶೋಷಣೆ ಮಾಡುತ್ತಿವೆ. ಈ ಹಿನ್ನೆಲೆ ಮೈಕ್ರೋ ಫೈನಾನ್ಸ್ಗಳ ಸಭೆ ಕರೆದು ಅವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಮೈಕ್ರೋ ಫೈನಾನ್ಸ್ಗಳಿವೆ. ಈ ಪೈಕಿ ಬಹುತೇಕ ಸಂಸ್ಥೆಗಳು ಆರ್ಬಿಐನ ನಿಯಮ ಪಾಲಿಸದೆ ಮನಬಂದಂತೆ ಕಾರ್ಯ ನಿರ್ವಹಿಸುತ್ತಿವೆ. ಬಡ ಮಹಿಳೆಯರಿಗೆ ಸಾಲ ನೀಡಿದ ನಂತರ ಸಾಲ ವಸೂಲಿ ನೆಪದಲ್ಲಿ ಮಹಿಳೆಯರ ಮನೆಗಳಿಗೆ ತೆರಳಿ ಮಾನಸಿಕ ಹಿಂಸೆ ನೀಡುತ್ತಿವೆ. ಸಾಲ ಮರುಪಾವತಿ ಮಾಡುವವರೆಗೂ ಸಂಸ್ಥೆಯ ಸಿಬ್ಬಂದಿ ಸಾಲಗಾರರ ಮನೆಯಲ್ಲೇ ಕುಳಿತು ಕಿರಿಕಿರಿ ಮಾಡುತ್ತಾರೆ ಎಂದು ದೂರಿದರು.
ಇದನ್ನೂ ಓದಿ ⇒ ಸಕ್ರೆಬೈಲಿನ ಸಲಗಕ್ಕೆ ಆನೆ ದಿನದಂದು ನಾಮಕರಣ, ಏನಂತ ಹೆಸರಿಡಲಾಯ್ತು?
ಆರ್ಬಿಐ ನಿಯಮಾನುಸಾರ ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ಮಾತ್ರ ಸಾಲ ವಸೂಲು ಮಾಡಬೇಕು. ಆದರೆ ನಿಯಮ ಮೀರಿ ವರ್ತಿಸುವ ಸಿಬ್ಬಂದಿ ಸಾಲಗಾರರ ಮೇಲೆ ಮನಬಂದಂತೆ ವಾಗ್ದಾಳಿ ನಡೆಸುತ್ತಾರೆ. ಹಗಲು-ರಾತ್ರಿ ಎನ್ನದೆ ಸಾಲ ವಸೂಲಿ ಮಾಡುತ್ತಾರೆ. ಕೂಡಲೇ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಜಿಲ್ಲಾಧಿಕಾರಿ ಮೈಕ್ರೋ ಫೈನಾನ್ಸ್ ಮುಖ್ಯಸ್ಥರ ಸಭೆ ಕರೆದು ಸೂಕ್ತ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ ⇒ ಗಾಜನೂರು ತುಂಗಾ ಜಲಾಶಯದಲ್ಲಿ ತಪ್ಪಿದ ದುರಂತ, ತುಂಡಾಗುವ ಹಂತದಲ್ಲಿದೆ ಗೇಟ್ ರೋಪ್
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು





