DAM LEVEL, 13 AUGUST 2024 : ಮಲೆನಾಡು ಭಾಗದಲ್ಲಿ ಮಳೆ ಸಂಪೂರ್ಣ ತಗ್ಗಿದೆ. ಹಾಗಾಗಿ ಮೂರು ಪ್ರಮುಖ ಜಲಾಶಯಗಳ ಒಳ ಮತ್ತು ಹೊರ ಹರಿವು ಇಳಿಕೆಯಾಗಿದೆ. (ಈ ಸುದ್ದಿಯನ್ನು ಇನ್ನು 56 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಲಿಂಗನಮಕ್ಕಿ ಜಲಾಶಯದ ಒಳ ಹರಿವು ಇಳಿಕೆಯಾಗಿದೆ. ಇವತ್ತು 7741 ಕ್ಯೂಸೆಕ್ ಒಳ ಹರಿವು ಇದೆ. 7619 ಕ್ಯೂಸೆಕ್ ನೀರಿನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 1816.65 ಅಡಿ ಇದೆ. ಜಲಾಶಯದಲ್ಲಿ 143.74 ಟಿಎಂ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ ⇒ ಗಾಜನೂರು ತುಂಗಾ ಜಲಾಶಯದಲ್ಲಿ ತಪ್ಪಿದ ದುರಂತ, ತುಂಡಾಗುವ ಹಂತದಲ್ಲಿದೆ ಗೇಟ್ ರೋಪ್
ತುಂಗಾ ಜಲಾಶಯದ ಒಳ ಮತ್ತು ಹೊರ ಹರಿವು ಕೂಡ ಇಳಿಕೆಯಾಗಿದೆ. ಇವತ್ತು 9137 ಕ್ಯೂಸೆಕ್ ಒಳ ಹರಿವು ಇದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಸದ್ಯ ಶಿವಮೊಗ್ಗದಲ್ಲಿ ತುಂಗಾ ನದಿಯಲ್ಲಿ ನೀರಿನ ಹರಿವು ಇದೆ.
ಇದನ್ನೂ ಓದಿ ⇒ ಸಕ್ರೆಬೈಲಿನ ಸಲಗಕ್ಕೆ ಆನೆ ದಿನದಂದು ನಾಮಕರಣ, ಏನಂತ ಹೆಸರಿಡಲಾಯ್ತು?
ಭದ್ರಾ ಜಲಾಶಯದ ಒಳ ಹರಿವು ಕುಸಿತ ಕಂಡಿದೆ. ಇವತ್ತು 6075 ಕ್ಯೂಸೆಕ್ ಒಳ ಹರಿವು ಇದೆ. 7811 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತತ ಜಲಾಶಯದ ನೀರಿನ ಮಟ್ಟ 180.1 ಅಡಿ ಇದೆ. 64.32 ಟಿಎಂಸಿ ನೀರು ಸಂಗ್ರಹವಾಗಿದೆ.
