GOOD MORNING SHIVAMOGGA | 16 AUGUST 2024
ಇನ್ನೊಬ್ಬರ ತಪ್ಪು ಹುಡುಕಲು ತುಂಬಾ ಬುದ್ದಿವಂತಿಕೆ ಬೇಕಾಗಿಲ್ಲ. ಇನ್ನೊಬ್ಬರ ಒಳ್ಳೆಯತನ ಮೆಚ್ಚಿಕೊಳ್ಳಲು ದೊಡ್ಡ ಹೃದಯ ಬೇಕು.
ಶಿವಮೊಗ್ಗ ಜಿಲ್ಲೆಯಲ್ಲಿ ಆಗಾಗ ಭಾರಿ ಮಳೆ ಸುರಿಯುತ್ತಿದೆ. ಆದರೆ ತಾಪಮಾನ ಏರಿಕೆಯಾಗುತ್ತಿದೆ. ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 31 ಡಿಗ್ರಿ, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ತೀರ್ಥಹಳ್ಳಿ ಗರಿಷ್ಠ 32 ಡಿಗ್ರಿ, ಕನಿಷ್ಠ 25 ಡಿಗ್ರಿ, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಪುರ ತಾಲೂಕುಗಳಲ್ಲಿ ಗರಿಷ್ಠ 31 ಡಿಗ್ರಿ, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
![]() |
ಇದನ್ನೂ ಓದಿ ⇒ ಶಿವಮೊಗ್ಗ ಲೈವ್ನಲ್ಲಿ ಇನ್ಮುಂದೆ ಸುದ್ದಿಯಷ್ಟೇ ಅಲ್ಲ, ಹೊಸ ಕಾಲಂಗಳು ಆರಂಭ, ಏನೆಲ್ಲ ಹೊಸತು ಬರಲಿದೆ?
ಶಿವಮೊಗ್ಗ ಸಿಟಿ ನ್ಯೂಸ್
ಡಿಎಆರ್ ಮೈದಾನ : ಜಿಲ್ಲಾಡಳಿತದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸಚಿವ ಮಧು ಬಂಗಾರಪ್ಪ ಧ್ವಜಾರೋಹಣ ಮಾಡಿದರು.
ಡಿಎಆರ್ ಸಭಾಂಗಣ : ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕು ಸ್ಥಗಿತಗೊಳಿಸುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಾಂಧಿ ಬಜಾರ್ : ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಪೂಜೆ ಸಾಮಾಗ್ರಿ ಖರೀದಿಸಿದ ಜನರು. ಹೂವು, ಹಣ್ಣು, ತರಕಾರಿ ಬೆಲೆ ಹೆಚ್ಚಳ.
ಕಲ್ಲೂರು ಮಂಡ್ಲಿ : ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇಲ್ಲಿನ ಕೈಗಾರಿಕಾ ಪ್ರದೇಶದ ಬಳಿ ಕಾರ್ಮಿಕ ಮಹಿಳೆಯೊಬ್ಬರ ಕೊರಳಲ್ಲಿದ್ದ 20 ಗ್ರಾಂ ತೂಕದ ಮಾಂಗಲ್ಯ ಸರ ಅಪಹರಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆ : ಮಹಾನಗರ ಪಾಲಿಕೆ ಮಾಜಿ ಸದಸ್ಯ ಸತ್ಯನಾರಾಯಣ ರಾವ್ (ಮೊಟ್ಟೆ ಸತೀಶ) ಮೇಲೆ ಕಳೆದ ರಾತ್ರಿ ದಾಳಿಯಾಗಿದೆ. ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು.
ಇದನ್ನೂ ಓದಿ ⇒ ಶಿವಮೊಗ್ಗ ಸಿಟಿಯ 15 ಕಿ.ಮೀ ವ್ಯಾಪ್ತಿಯಲ್ಲಿವೆ 10 ಪ್ರಮುಖ ಪಿಕ್ನಿಕ್ ತಾಣಗಳು, ಇಲ್ಲಿದೆ ಲಿಸ್ಟ್
ತಾಲೂಕು ಸುದ್ದಿ
ಗಣರಾಜ್ಯೋತ್ಸವ : ಜಿಲ್ಲೆಯ ಎಲ್ಲ ತಾಲೂಕಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ. ಎಲ್ಲೆಲ್ಲಿ ಯಾರೆಲ್ಲ ಧ್ವಜಾರೋಣ ಮಾಡಿದರು ಎಂಬ ವಿವರ ಇಲ್ಲಿದೆ. ಓದಲು ಕ್ಲಿಕ್ ಮಾಡಿ : ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಸಂಭ್ರಮ, ಜಿಲ್ಲೆಯಾದ್ಯಂತ ಯಾರೆಲ್ಲ ಧ್ವಜಾರೋಹಣ ಮಾಡಿದರು? ಇಲ್ಲಿದೆ ಡಿಟೇಲ್ಸ್
ಶಿಕಾರಿಪುರ : ನಳ್ಳಿನಕೊಪ್ಪ ಗ್ರಾಮದಲ್ಲಿ ಕಾಣಿಸಿಕೊಂಡ 8 ಅಡಿ ಉದ್ದದ ಹೆಬ್ಬಾವು. ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ.
ಸಾಗರ : ವೆಂಕಟವಳ್ಳಿ ಮತ್ತು ರಾಮನಗದ್ದೆ ಸಂಪರ್ಕ ರಸ್ತೆಯ ಮೋರಿ ಕುಸಿದಿದೆ. ಈ ಮಾರ್ಗದಲ್ಲಿ ಸಂಚರ ಸ್ಥಗಿತಗೊಂಡಿದೆ.
ಭದ್ರಾವತಿ : ನ್ಯೂ ಟೌನ್ ವಿಐಎಸ್ಎಲ್ ವತಿಯಿಂದ ಕ್ರೀಡಾಂಗಣದಲ್ಲಿ ಸ್ವತಂತ್ರ್ಯ ದಿನಾಚರಣೆ. ಸಾರ್ವಜನಿಕರಿಗೆ 150 ಸಸಿ ವಿತರಣೆ.
ತೀರ್ಥಹಳ್ಳಿ : ರೈತರು ಸಾಗುವಳಿ ಮಾಡುತ್ತಿರುವ ಪ್ರದೇಶವನ್ನು ಒತ್ತುವರಿ ಎಂದು ಸರ್ಕಾರ ಪರಿಗಣಿಸಬಾರದು. ಆ.19ರಂದು ತಾಲೂಕು ಕಚೇರಿ ಮುಂಭಾಗ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗೆ ನಿರ್ಧಾರ.
ಹೊಸನಗರ : ನಗರ – ದೇವಗಂಗೆ ಬಸವನಬ್ಯಾಣ ಸಂಪರ್ಕಕ್ಕಾಗಿ ನೂತನ ಬೋಟ್ಗೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಿದರು.
ಸೊರಬ : ಕುಬಟೂರು ಕೆರೆಗೆ ಸಚಿವ ಮಧು ಬಂಗಾರಪ್ಪ ಬಾಗಿನ ಅರ್ಪಣೆ. ನನ್ನ ಶಾಲೆ, ನನ್ನ ಜವಾಬ್ದಾರಿ ಕಾರ್ಯಕ್ರಮದಡಿ ಇಲ್ಲಿನ ಪ್ರಾಥಮಿಕ ಶಾಲೆಗೆ ಇಂದು 10 ಲಕ್ಷ ರೂ. ದೇಣಿಗೆ.
ಇದನ್ನೂ ಓದಿ ⇒ ರಾತ್ರಿ ಮನೆ ಹೊರಗೆ ಕೇಳಿತು ಜೋರು ಶಬ್ದ, ಬಾಗಿಲು ತೆಗೆದ ಮಾಲೀಕನತ್ತ ತೂರಿಬಂತು ಇಟ್ಟಿಗೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200