ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DAM LEVEL, 28 AUGUST 2024 : ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ, ಹೊರ ಹರಿವು ಹೆಚ್ಚಳವಾಗಿದೆ.
ಎಷ್ಟಿದೆ ಒಳ ಹರಿವು?
ಲಿಂಗನಮಕ್ಕಿ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ಇವತ್ತು 26,162 ಕ್ಯೂಸೆಕ್ ಒಳ ಹರಿವು ಇದೆ. 39,896 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ನೀರಿನ ಮಟ್ಟ 1817.20 ಅಡಿಗೆ ತಲುಪಿದೆ. ಪ್ರಸ್ತುತ ಜಲಾಶಯದಲ್ಲಿ 145.47 ಟಿಎಂಸಿ ನೀರು ಇದೆ.
ತುಂಗಾ ಜಲಾಶಯದ ಒಳ ಹರಿವು ಕೂಡ ಹೆಚ್ಚಳವಾಗಿದೆ. ಇವತ್ತು 14,724 ಕ್ಯೂಸೆಕ್ ಒಳ ಹರಿವು ಇದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಇದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಪುನಃ ಏರಿಕೆಯಾಗಿದೆ.
ಇದನ್ನೂ ಓದಿ ⇒ GOOD MORNING ಶಿವಮೊಗ್ಗ | ಜಿಲ್ಲೆಯಲ್ಲಿ ಎಲ್ಲೆಲ್ಲಿ ಏನೇನಾಗಿದೆ? ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿ
ಭದ್ರಾ ಜಲಾಶಯದ ಒಳ ಹರಿವು ಕೂಡ ತುಸು ಏರಿಕೆಯಾಗಿದೆ. ಇವತ್ತು 8571 ಕ್ಯೂಸೆಕ್ ಒಳ ಹರಿವು ಇದೆ. 3942 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 181.2 ಅಡಿ ಇದೆ. ಪ್ರಸ್ತುತ ಜಲಾಶಯದಲ್ಲಿ 65.57 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ ⇒ ದರ್ಶನ್ ಸಹಚರರು ಆಗಮನಕ್ಕು ಮುನ್ನವೆ ಶಿವಮೊಗ್ಗ ಜೈಲಿನ ಮೇಲೆ 120 ಪೊಲೀಸರಿಂದ ದಾಳಿ
LATEST NEWS
- ಶಿವಮೊಗ್ಗದಲ್ಲಿ ನಾಳೆಯಿಂದ ಎರಡು ದಿನ ಸಾಹಿತ್ಯ ಸಮ್ಮೇಳನ, ಯಾರೆಲ್ಲ ಭಾಗವಹಿಸ್ತಿದ್ದಾರೆ?

- ನವುಲೆ ಬಳಿ ನೇಣು ಬಿಗಿದುಕೊಂಡ ಯುವಕನನ್ನು ರಕ್ಷಿಸಿದ ಪೊಲೀಸರು, ಹೇಗಿತ್ತು ಕಾರ್ಯಾಚರಣೆ?

- ಹೊಂಬುಜದಲ್ಲಿ ಬೆಳ್ಳಿ ರಥೋತ್ಸವ, ಜಾತ್ರೆಯಲ್ಲಿ ಏನೇನಲ್ಲ ಪೂಜೆ ನಡೆಯಿತು?

- ಜನವರಿಯಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

- ಕಾರ್ಗಲ್ನಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿಢೀರ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

About The Editor
ನಿತಿನ್ ಆರ್.ಕೈದೊಟ್ಲು





