ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA, 6 SEPTEMBER 2024 : ನಗರದಲ್ಲಿ ಶ್ರದ್ಧೆ, ಭಕ್ತಿಯಿಂದ ಗೌರಿ, ಗಣೇಶ (Ganesh) ಚತುರ್ಥಿ ಆಚರಿಸಲಾಗುತ್ತಿದೆ. ಬೆಳಗ್ಗೆಯಿಂದಲೇ ದೇವಸ್ಥಾನಗಳು ಮತ್ತು ಮನೆಗಳಲ್ಲಿ ಗೌರಿ ಪೂಜೆ ಸಲ್ಲಿಸಲಾಗುತ್ತಿದೆ.
ಗೌರಿ ಹಬ್ಬದ ಸಡಗರ, ಬಾಗಿನ
ಶಿವಮೊಗ್ಗದಲ್ಲಿ ಗೌರಿ ಹಬ್ಬದ ಹಿನ್ನೆಲೆ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮನೆಗಳಲ್ಲಿ ಗೌರಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗುತ್ತಿದೆ. ಗೌರಿಗೆ ಎಡೆ ಇಟ್ಟು, ಹಬ್ಬದೂಟ ಸವಿಯಲಾಗುತ್ತಿದೆ. ಮನೆಯ ಹೆಣ್ಮಕ್ಕಳಿಗೆ ಬಾಗಿನ ನೀಡಿ ಶುಭ ಹಾರೈಸಲಾಗುತ್ತಿದೆ.

ನಾಳೆ ಗಣೇಶ ಚತುರ್ಥಿಗೆ ಅದ್ಧೂರಿ ಸಿದ್ಧತೆ ನಡೆಸಲಾಗುತ್ತಿದೆ. ನಗರದ ವಿವಿಧೆಡೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ, ಮನೆಗಳಲ್ಲಿಯು ಗಜಮುಖನನ್ನು ಇರಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ಹಿನ್ನೆಲೆ ಇಂದಿನಿಂದಲೇ ಗಣಪತಿ ಮೂರ್ತಿ ಖರೀದಿ ಜೋರಾಗಿದೆ. ಸೈನ್ಸ್ ಮೈದಾನದಲ್ಲಿ ಗಣಪತಿ ಮೂರ್ತಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ನ್ಯಾಮತಿ, ಕುಂಸಿ, ಹೊನ್ನಾಳಿ, ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಮೂರ್ತಿ ತಯಾರಕರು ಸ್ಟಾಲ್ ಸ್ಥಾಪಿಸಿ, ಗಣಪತಿ ಮೂರ್ತಿ ಮಾರಾಟ ಮಾಡುತ್ತಿದ್ದಾರೆ.» ಗಣೇಶ ಚತುರ್ಥಿಗೆ ಸಿದ್ಧತೆ ಜೋರು

ಇಂದೇ ಗಣಪತಿ ಮೂರ್ತಿ ಖರೀದಿ
ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಇಂದೇ ಗಣಪತಿ ಮೂರ್ತಿ ಖರೀದಿ ಮಾಡುತ್ತಿದ್ದಾರೆ. ಶುಕ್ರವಾರ ಬೆಳಗ್ಗೆಯೇ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಿನ್ನೆಲೆ ಇಂದೇ ಖರೀದಿ ಜೋರಾಗಿದೆ. ಪುಟ್ಟ ಮೂರ್ತಿಗಳಿಂದ ಹಿಡಿದು ದೊಡ್ಡ ಗಾತ್ರದ ಗಣಪತಿ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಮೂರ್ತಿ ನಿಗದಿಪಡಿಸಿ, ಪೂಜೆ ಸಲ್ಲಿಸಿ, ಗಜಮುಖನ ಕಣ್ಣಿಗೆ ಬಟ್ಟೆ ಕಟ್ಟಿ ಗೂಡ್ಸ್ ವಾಹನಗಳು, ಟ್ರಾಕ್ಟರ್‌ಗಳಲ್ಲಿ ಮೂರ್ತಿ ಕೊಂಡೊಯ್ಯುತ್ತಿದ್ದಾರೆ.

ಅಲಂಕಾರಿಕ ವಸ್ತುಗಳಿಗೆ ಡಿಮಾಂಡ್
ಇನ್ನೊಂದೆಡೆ ಗಣಪತಿ ಪೆಂಡಾಲ್‌ಗಳು ಸಿದ್ಧವಾಗಿವೆ. ಅಂತಿಮ ಸಿದ್ಧತೆಯಾಗುತ್ತಿದೆ. ಅದ್ಧೂರಿ ಪೆಂಡಾಲ್ ನಿರ್ಮಿಸಿದ್ದು ಅಲಂಕಾರ ಮಾಡಲಾಗುತ್ತಿದೆ. ಅಲಂಕಾರ ಮತ್ತು ಪೂಜೆಗಾಗಿ ಹೂವು, ಹಣ್ಣು, ಅಲಂಕಾರಿಕ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಗಾಂಧಿ ಬಜಾರ್‌ನ ಫ್ಯಾನ್ಸಿ ಶಾಪ್, ನಾವೆಲ್ಟಿ ಶಾಪ್‌ಗಳಲ್ಲಿ ಜನ ಜಂಗುಳಿ ಹೆಚ್ಚಿದೆ. ಕೇಸರಿ ಶಾಲು, ಕೇಸರಿ ಧ್ವಜಗಳ ಖರೀದಿಯು ಜೋರಿದೆ.









ಇದನ್ನೂ ಓದಿ » ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾಣೆಯಾಗಿದ್ದ ಪತಿ ಹೆಣವಾಗಿ ಪತ್ತೆ
LATEST NEWS
- ನಾಳೆಯಿಂದ ಶಿವಮೊಗ್ಗದ ಶೇ.90ರಷ್ಟು ಹೊಟೇಲ್ಗಳು ಬಂದ್, ಕಾರಣವೇನು?

- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





