ಶಿವಮೊಗ್ಗದಲ್ಲಿ ಭಕ್ತಿಯಿಂದ ಗೌರಿ ಪೂಜೆ, ಸೈನ್ಸ್‌ ಮೈದಾನದಲ್ಲಿ ಗಣಪತಿ ಮೂರ್ತಿ ಖರೀದಿ ಭರಾಟೆ

SHIMOGA, 6 SEPTEMBER 2024 : ನಗರದಲ್ಲಿ ಶ್ರದ್ಧೆ, ಭಕ್ತಿಯಿಂದ ಗೌರಿ, ಗಣೇಶ (Ganesh) ಚತುರ್ಥಿ ಆಚರಿಸಲಾಗುತ್ತಿದೆ. ಬೆಳಗ್ಗೆಯಿಂದಲೇ ದೇವಸ್ಥಾನಗಳು ಮತ್ತು ಮನೆಗಳಲ್ಲಿ ಗೌರಿ ಪೂಜೆ ಸಲ್ಲಿಸಲಾಗುತ್ತಿದೆ. (ಈ ಸುದ್ದಿಯನ್ನು ಇನ್ನು 81 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಗೌರಿ ಹಬ್ಬದ ಸಡಗರ, ಬಾಗಿನ

ಶಿವಮೊಗ್ಗದಲ್ಲಿ ಗೌರಿ ಹಬ್ಬದ ಹಿನ್ನೆಲೆ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮನೆಗಳಲ್ಲಿ ಗೌರಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲಾಗುತ್ತಿದೆ. ಗೌರಿಗೆ ಎಡೆ ಇಟ್ಟು, ಹಬ್ಬದೂಟ ಸವಿಯಲಾಗುತ್ತಿದೆ. ಮನೆಯ ಹೆಣ್ಮಕ್ಕಳಿಗೆ ಬಾಗಿನ ನೀಡಿ ಶುಭ ಹಾರೈಸಲಾಗುತ್ತಿದೆ.

Ganesh-Chaturthi-ganapathi-idol-in-science-field

» ಗಣೇಶ ಚತುರ್ಥಿಗೆ ಸಿದ್ಧತೆ ಜೋರು

ನಾಳೆ ಗಣೇಶ ಚತುರ್ಥಿಗೆ ಅದ್ಧೂರಿ ಸಿದ್ಧತೆ ನಡೆಸಲಾಗುತ್ತಿದೆ. ನಗರದ ವಿವಿಧೆಡೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ, ಮನೆಗಳಲ್ಲಿಯು ಗಜಮುಖನನ್ನು ಇರಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ಹಿನ್ನೆಲೆ ಇಂದಿನಿಂದಲೇ ಗಣಪತಿ ಮೂರ್ತಿ ಖರೀದಿ ಜೋರಾಗಿದೆ. ಸೈನ್ಸ್‌ ಮೈದಾನದಲ್ಲಿ ಗಣಪತಿ ಮೂರ್ತಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ನ್ಯಾಮತಿ, ಕುಂಸಿ, ಹೊನ್ನಾಳಿ, ಶಿವಮೊಗ್ಗ ಸೇರಿದಂತೆ ವಿವಿಧೆಡೆಯ ಮೂರ್ತಿ ತಯಾರಕರು ಸ್ಟಾಲ್‌ ಸ್ಥಾಪಿಸಿ, ಗಣಪತಿ ಮೂರ್ತಿ ಮಾರಾಟ ಮಾಡುತ್ತಿದ್ದಾರೆ.

Ganesh Chaurthi in Shimoga

ಇಂದೇ ಗಣಪತಿ ಮೂರ್ತಿ ಖರೀದಿ

ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಇಂದೇ ಗಣಪತಿ ಮೂರ್ತಿ ಖರೀದಿ ಮಾಡುತ್ತಿದ್ದಾರೆ. ಶುಕ್ರವಾರ ಬೆಳಗ್ಗೆಯೇ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಿನ್ನೆಲೆ ಇಂದೇ ಖರೀದಿ ಜೋರಾಗಿದೆ. ಪುಟ್ಟ ಮೂರ್ತಿಗಳಿಂದ ಹಿಡಿದು ದೊಡ್ಡ ಗಾತ್ರದ ಗಣಪತಿ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಮೂರ್ತಿ ನಿಗದಿಪಡಿಸಿ, ಪೂಜೆ ಸಲ್ಲಿಸಿ, ಗಜಮುಖನ ಕಣ್ಣಿಗೆ ಬಟ್ಟೆ ಕಟ್ಟಿ ಗೂಡ್ಸ್‌ ವಾಹನಗಳು, ಟ್ರಾಕ್ಟರ್‌ಗಳಲ್ಲಿ ಮೂರ್ತಿ ಕೊಂಡೊಯ್ಯುತ್ತಿದ್ದಾರೆ.

Ganesh Chaurthi in Shimoga

ಅಲಂಕಾರಿಕ ವಸ್ತುಗಳಿಗೆ ಡಿಮಾಂಡ್‌

ಇನ್ನೊಂದೆಡೆ ಗಣಪತಿ ಪೆಂಡಾಲ್‌ಗಳು ಸಿದ್ಧವಾಗಿವೆ. ಅಂತಿಮ ಸಿದ್ಧತೆಯಾಗುತ್ತಿದೆ. ಅದ್ಧೂರಿ ಪೆಂಡಾಲ್‌ ನಿರ್ಮಿಸಿದ್ದು ಅಲಂಕಾರ ಮಾಡಲಾಗುತ್ತಿದೆ. ಅಲಂಕಾರ ಮತ್ತು ಪೂಜೆಗಾಗಿ ಹೂವು, ಹಣ್ಣು, ಅಲಂಕಾರಿಕ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಗಾಂಧಿ ಬಜಾರ್‌ನ ಫ್ಯಾನ್ಸಿ ಶಾಪ್‌, ನಾವೆಲ್ಟಿ ಶಾಪ್‌ಗಳಲ್ಲಿ ಜನ ಜಂಗುಳಿ ಹೆಚ್ಚಿದೆ. ಕೇಸರಿ ಶಾಲು, ಕೇಸರಿ ಧ್ವಜಗಳ ಖರೀದಿಯು ಜೋರಿದೆ.

Ganesh Chaurthi in Shimoga

Ganesh Chaurthi in Shimoga

Ganesh Chaurthi in Shimoga

Ganesh Chaurthi in Shimoga

Ganesh Chaurthi in Shimoga

Ganesh Chaurthi in Shimoga

Ganesh Chaurthi in Shimoga

Ganesh Chaurthi in Shimoga

Ganesh Chaurthi in Shimoga

ಇದನ್ನೂ ಓದಿ » ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾಣೆಯಾಗಿದ್ದ ಪತಿ ಹೆಣವಾಗಿ ಪತ್ತೆ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Ganesh-Chaturthi-ganapathi-idol-in-science-field

Leave a Comment