ಕೆಲಸಕ್ಕೆ ಸೇರಿದ ಎರಡನೇ ದಿನ ತಿಂಡಿಗೆ ಹೋದವನು ವಾಪಸಾಗಲಿಲ್ಲ, ಆಮೇಲೆ ಮಾಲೀಕನಿಗೆ ಕಾದಿತ್ತು ಆಘಾತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA, 7 SEPTEMBER 2024 : ಕೆಲಸಕ್ಕೆ (worker) ಸೇರಿದ ಎರಡೇ ದಿನದಲ್ಲಿ 2.75 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಕದ್ದು ವ್ಯಕ್ತಿ ಪರಾರಿಯಾಗಿದ್ದಾನೆ. ಶಿವಮೊಗ್ಗದ ತಿರುಪಾಳ್ಳಯ್ಯನ ಕೇರಿಯ ಜ್ಯುವೆಲರಿ ಶಾಪ್‌ ಒಂದರಲ್ಲಿ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ಕಲ್ಕತ್ತಾ ಮೂಲದ ಸುಫೀಕ್‌ ಉಲ್‌ ಎಂಬಾತ ಆಗಸ್ಟ್‌ 31ರಂದು ಇಲ್ಲಿ ಕೆಲಸಕ್ಕೆ ಸೇರಿದ್ದ. ಕಸೂತಿ ಕೆಲಸ ಮಾಡುವಂತೆ ಆತನಿಗೆ ಜ್ಯುವೆಲರಿ ಶಾಪ್‌ ಮಾಲೀಕ 40 ಗ್ರಾಂ ಚಿನ್ನದ ಗಟ್ಟಿ ನೀಡಿದ್ದರು. ಸೆಪ್ಟೆಂಬರ್‌ 2ರಂದು ಸಂಜೆ ತಿಂಡಿ ತಿಂದು ಬರುವುದಾಗಿ ತಿಳಿಸಿ ಆತ ಅಂಗಡಿಯಿಂದ ಹೋಗಿದ್ದ. ಬಹು ಹೊತ್ತಿನ ತನಕ ಹಿಂತಿರುಗಿರಲಿಲ್ಲ.

Police-Van-Jeep-at-Shimoga-Nehru-Road

ಅನುಮಾನಗೊಂಡ ಮಾಲೀಕ ಪರಿಶೀಲಿಸಿದಾಗ ಚಿನ್ನದ ಗಟ್ಟಿ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಸುಫೀಕ್‌ ಉಲ್‌ ಚಿನ್ನದ ಗಟ್ಟಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ದೂರು ನೀಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಜಗಮಗ ಕಂಗೊಳಿಸಿದ ಗಾಜನೂರಿನ ತುಂಗಾ ಜಲಾಶಯ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : September 7, 2024

Leave a Comment