ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 7 SEPTEMBER 2024 : ಕೆಲಸಕ್ಕೆ (worker) ಸೇರಿದ ಎರಡೇ ದಿನದಲ್ಲಿ 2.75 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಕದ್ದು ವ್ಯಕ್ತಿ ಪರಾರಿಯಾಗಿದ್ದಾನೆ. ಶಿವಮೊಗ್ಗದ ತಿರುಪಾಳ್ಳಯ್ಯನ ಕೇರಿಯ ಜ್ಯುವೆಲರಿ ಶಾಪ್ ಒಂದರಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಪಶ್ಚಿಮ ಬಂಗಾಳದ ಕಲ್ಕತ್ತಾ ಮೂಲದ ಸುಫೀಕ್ ಉಲ್ ಎಂಬಾತ ಆಗಸ್ಟ್ 31ರಂದು ಇಲ್ಲಿ ಕೆಲಸಕ್ಕೆ ಸೇರಿದ್ದ. ಕಸೂತಿ ಕೆಲಸ ಮಾಡುವಂತೆ ಆತನಿಗೆ ಜ್ಯುವೆಲರಿ ಶಾಪ್ ಮಾಲೀಕ 40 ಗ್ರಾಂ ಚಿನ್ನದ ಗಟ್ಟಿ ನೀಡಿದ್ದರು. ಸೆಪ್ಟೆಂಬರ್ 2ರಂದು ಸಂಜೆ ತಿಂಡಿ ತಿಂದು ಬರುವುದಾಗಿ ತಿಳಿಸಿ ಆತ ಅಂಗಡಿಯಿಂದ ಹೋಗಿದ್ದ. ಬಹು ಹೊತ್ತಿನ ತನಕ ಹಿಂತಿರುಗಿರಲಿಲ್ಲ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಅನುಮಾನಗೊಂಡ ಮಾಲೀಕ ಪರಿಶೀಲಿಸಿದಾಗ ಚಿನ್ನದ ಗಟ್ಟಿ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಸುಫೀಕ್ ಉಲ್ ಚಿನ್ನದ ಗಟ್ಟಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ದೂರು ನೀಡಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಜಗಮಗ ಕಂಗೊಳಿಸಿದ ಗಾಜನೂರಿನ ತುಂಗಾ ಜಲಾಶಯ