ಶಿವಮೊಗ್ಗ ಸಿಟಿ ಕೇಸರಿಮಯ, ಎಲ್ಲೆಲ್ಲಿ ಹೇಗಿದೆ ಅಲಂಕಾರ?

SHIMOGA NEWS, 14 SEPTEMBER 2024 : ಸೆ.17ರಂದು ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ನಗರದ ವಿವಿಧೆಡೆ ಅಲಂಕಾರ ಕಾರ್ಯ ನಡೆಯುತ್ತಿದೆ. ಸದ್ಯ ಶಿವಮೊಗ್ಗ ಸಿಟಿ ಕೇಸರಿಮಯವಾಗಿದೆ (Saffron).

ನಗರದ ವಿವಿಧೆಡೆ ಕೇಸರಿ ಧ್ವಜ, ಬಂಟಿಂಗ್ಸ್‌ ಸೇರಿದಂತೆ ಹಲವು ಅಲಂಕಾರ ಮಾಡಲಾಗುತ್ತಿದೆ. ಹಿಂದೂ ಅಲಂಕಾರ ಸಮಿತಿ ವತಿಯಿಂದ ಅಲಂಕಾರ ಕಾರ್ಯ ನಡೆಯುತ್ತಿದೆ.

ವಿವಿಧೆಡೆ ಕೇಸರಿ ಧ್ವಜ, ಬಂಟಿಂಗ್ಸ್‌

ಶಿವಮೊಗ್ಗದ ಬಿ.ಹೆಚ್‌.ರಸ್ತೆಯಲ್ಲಿ ಕೇಸರಿ ಧ್ವಜ, ಬಂಟಿಂಗ್ಸ್‌ಗಳನ್ನು ಕಟ್ಟಲಾಗಿದೆ. ಸಹ್ಯಾದ್ರಿ ಕಲೇಜು ಮುಂಭಾಗದಿಂದಲೆ ಅಲಂಕಾರ ಮಾಡಲಾಗಿದೆ. ಎಂ.ಆರ್‌.ಎಸ್‌ ಸರ್ಕಲ್‌ ಕೇಸರಿಮಯವಾಗಿದೆ. ಇನ್ನು, ನೆಹರು ರಸ್ತೆಯಲ್ಲಿ ಅಲಂಕಾರ ಕಾರ್ಯ ಪ್ರಗತಿಯಲ್ಲಿದೆ. ಧ್ವಜ, ಬಂಟಿಂಗ್ಸ್‌ಗಳ ಜೊತೆಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗುತ್ತಿದೆ. ದುರ್ಗಿಗುಡಿ ರಸ್ತೆಯೂ ಕೇಸರಿಮಯವಾಗುತ್ತಿದೆ.

Hindu Mahasabha Ganesh 2024

ಕಣ್ಸೆಳೆಯುತ್ತಿದೆ ಗಾಂಧಿ ಬಜಾರ್‌

ಇನ್ನೊಂದೆಡೆ ಗಾಂಧಿ ಬಜಾರ್‌ ರಸ್ತೆಯಲ್ಲಿಯು ಅಲಂಕಾರ ಮಾಡಲಾಗಿದೆ. ರಸ್ತೆಯು ಉದ್ದಕ್ಕು ಕೇಸರಿ ಬಂಟಿಂಗ್ಸ್‌ ಕಟ್ಟಲಾಗಿದೆ. ಶಿವಪ್ಪನಾಯಕ ಪ್ರತಿಮೆ ಮುಂಭಾಗ ಬೃಹತ್‌ ಪ್ರವೇಶ ದ್ವಾರ ನಿರ್ಮಿಸಲಾಗುತ್ತಿದೆ. ಈ ಬಾರಿ ಮಥುರಾ ದೇವಸ್ಥಾನದ ಮಾದರಿಯನ್ನು ನಿರ್ಮಿಸಲಾಗಿದೆ. ಜೀವನ್‌ ಕಲಾ ಸನ್ನಿಧಿಯಲ್ಲಿ ಕಲಾವಿದ ಜೀವನ್‌ ಮತ್ತು ಅವರ ತಂಡ ಮಹಾದ್ವಾರ ನಿರ್ಮಿಸಿದ್ದು, ಅವಳವಡಿಕೆ ಕಾರ್ಯ ನಡೆಯುತ್ತಿದೆ.

Kalleshwara-Enterprises.webp

Hindu Mahasabha Ganesh 2024

Hindu Mahasabha Ganesh 2024

Hindu Mahasabha Ganesh 2024

Hindu Mahasabha Ganesh 2024

ಇದನ್ನೂ ಓದಿ » 70 ವರ್ಷದ ವೃದ್ಧನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, ಕಾರಣವೇನು?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment