ಬೈಕ್‌ ಓಡಿಸಿದ್ದು ಮಗ, ಭಾರಿ ದಂಡ ಕಟ್ಟಬೇಕಾಯ್ತು ಅಪ್ಪ, ಏನಿದು ಕೇಸ್‌?

SHIMOGA NEWS, 15 SEPTEMBER 2024 : ಅಪ್ರಾಪ್ತ (Minor) ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಕೊಟ್ಟಿದ್ದ ತಂದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಬೈಕ್‌ ಚಲಾಯಿಸುತ್ತಿದ್ದ ಅಪ್ರಾಪ್ತ

ನಗರದ ಎಸ್‌.ಎನ್‌.ಸರ್ಕಲ್‌ನಲ್ಲಿ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್‌, ಸಿಬ್ಬಂದಿ ಸುರೇಶ್‌ ಮತ್ತು ದಿನೇಶ್‌ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಬೈಕ್‌ ತಡೆದು ತಪಾಸಣೆ ನಡೆಸಿದಾಗ ಚಾಲನೆ ಮಾಡುತ್ತಿದ್ದವನು ಅಪ್ರಾಪ್ತ ಎಂಬುದು ಗೊತ್ತಾಗಿತ್ತು. ಈ ಹಿನ್ನೆಲೆ ದ್ವಿಚಕ್ರ ವಾಹನದ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು.

ಈ ಸಂಬಂಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವಾಹನದ ಮಾಲೀಕ ದಲ್ಪತ್‌ ಸಿಂಗ್‌ಗೆ 25 ಸಾವಿರ ರೂ. ದಂಡ ವಿಧಿಸಿದೆ.

Nanjappa Hospital Advertisement

ಇದನ್ನೂ  ಓದಿ » ತೀರ್ಥಹಳ್ಳಿಯ ಯುವಕನಿಗೆ 5 ವರ್ಷ ಜೈಲು, 50 ಸಾವಿರ ರೂ. ದಂಡ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment