ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA NEWS, 22 SEPTEMBER 2024 : ಪತ್ರಕರ್ತರಿಗೆ ನೀಡುವ ‘ಟಿ.ಎಸ್. ರಾಮಚಂದ್ರರಾವ್’ (ಟಿಯೆಸ್ಸಾರ್) ಪ್ರಶಸ್ತಿ (Award) ಹಾಗೂ ‘ಮೊಹರೆ ಹಣಮಂತರಾಯ’ ಪ್ರಶಸ್ತಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದೆ. 2019ರಿಂದ 2023ನೇ ಸಾಲಿನ ಐದು ವರ್ಷಗಳ ಪ್ರಶಸ್ತಿಗಳನ್ನು ಒಟ್ಟಿಗೆ ಪ್ರಕಟಿಸಲಾಗಿದೆ.
ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ?
» ಟಿಯೆಸ್ಸಾರ್ ಪ್ರಶಸ್ತಿ : ಶಿವಾಜಿ ಗಣೇಶನ್ (ಪ್ರಜಾವಾಣಿ), ಎಸ್.ಆರ್. ಮಣೂರ (ಸಂಯುಕ್ತ ಕರ್ನಾಟಕ), ಆರ್. ಪೂರ್ಣಿಮಾ (ಪ್ರಜಾವಾಣಿ–ಉದಯವಾಣಿ), ಪದ್ಮರಾಜ ದಂಡಾವತಿ (ಪ್ರಜಾವಾಣಿ), ಸರಜೂ ಕಾಟ್ಕರ್ (ಕನ್ನಡಪ್ರಭ–ಇಂಡಿಯನ್ ಎಕ್ಸಪ್ರೆಸ್) ಅವರನ್ನು ಆಯ್ಕೆ ಮಾಡಲಾಗಿದೆ.
» ಮೊಹರೆ ಹಣಮಂತರಾಯ ಪ್ರಶಸ್ತಿ : ಗದಗ-ಬೆಟಗೇರಿಯ ‘ನವೋದಯ’ ಪತ್ರಿಕೆಯ ಸಂಪಾದಕ ರಾಜೀವ್ ಕಿದಿಯೂರ, ಬೆಂಗಳೂರಿನ ‘ಸಂವಾದ’ ಮಾಸಪತ್ರಿಕೆಯ ಸಂಪಾದಕ ಇಂದೂಧರ ಹೊನ್ನಾಪುರ, ಶಿವಮೊಗ್ಗದ ‘ಕ್ರಾಂತಿದೀಪ’ ಪತ್ರಿಕೆಯ ಸಂಪಾದಕ ಎನ್. ಮಂಜುನಾಥ್, ಮುಂಬೈನ ‘ಕರ್ನಾಟಕ ಮಲ್ಲ’ ಪತ್ರಿಕೆ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಕಲಬುರಗಿ ಜಿಲ್ಲೆಯ ‘ಕರ್ನಾಟಕ ಸಂಧ್ಯಾಕಾಲ’ ಪತ್ರಿಕೆ ಸಂಪಾದಕ ಶಿವಲಿಂಗಪ್ಪ ದೊಡ್ಡಮನಿ ಅವರನ್ನು ಆಯ್ಕೆ ಮಾಡಲಾಗಿದೆ.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಎರಡೂ ಪ್ರಶಸ್ತಿಗಳು ತಲಾ 2 ಲಕ್ಷ ರೂ. ನಗದು ಪುರಸ್ಕಾರ ಒಳಗೊಂಡಿವೆ.
ಇದನ್ನೂ ಓದಿ » ಶಿವಮೊಗ್ಗಕ್ಕೆ ಬರ್ತಿದ್ದಾರೆ ರೈಲ್ವೆ ಮಿನಿಸ್ಟರ್, ನಡೆಯಲಿದೆ ಮಹತ್ವದ ಸಭೆ
LATEST NEWS
- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

About The Editor
ನಿತಿನ್ ಆರ್.ಕೈದೊಟ್ಲು





