ಶಿವಮೊಗ್ಗದ ಬಾಲರಾಜ ಅರಸ್ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೇಬಲ್ ಡೆಕ್ ಅಳವಡಿಸಲಾಗಿದೆ. ಇದಕ್ಕೆ ನಡುರಸ್ತೆಯಲ್ಲಿ ಸ್ಲ್ಯಾಬ್‌ಗಳನ್ನು ಹಾಕಲಾಗಿದೆ. ಆರು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಈ ಸ್ಲ್ಯಾಬ್‌ಗಳು ಮುರಿದು ಹೋಗುತ್ತಿವೆ.
ಮತ್ತೆ ಮುರಿದಿವೆ ಸ್ಲ್ಯಾಬ್‌ಗಳು
ಕೆಇಬಿ ಸರ್ಕಲ್ ಕಡೆಯಿಂದ ಮಹಾವೀರ ಸರ್ಕಲ್ ಕಡೆಗೆ ತೆರಳುವ ಕಡೆ ಎರಡು ಬದಿಯ ಸ್ಲ್ಯಾಬ್‌ಗಳು ಮುರಿದು ಬೀಳುವ ಹಂತದಲ್ಲಿವೆ. ಸ್ವಲ್ಪ ಯಾಮಾರಿದರೆ ಇಲ್ಲಿ ಅಪಘಾತ ನಿಶ್ಚಿತ.

ಈ ಮಾರ್ಗದಲ್ಲಿ ರೈಸ್ ಬೌಲ್ ಹೊಟೇಲ್ ಎದುರು ಸ್ಲ್ಯಾಬ್ ತುಂಡಾಗಿದೆ. ಇದನ್ನು ರಿಪೇರಿ ಮಾಡುವ ಬದಲು, ಬ್ಯಾರಿಕೇಡ್‌ಗಳನ್ನು ಅಳವಡಿಸಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಇನ್ನು ಟ್ಯಾಂಕ್ ಮೊಹಲ್ಲಾ ರಸ್ತೆಯ ತಿರುವಿನಲ್ಲಿರುವ ಸ್ಲ್ಯಾಬ್ ಕೂಡ ಹಾನಿಯಾಗಿದೆ. ಹೆಚ್ಚು ವಾಹನ ಮತ್ತು ಜನ ಓಡಾಡುವ ರಸ್ತೆಯಲ್ಲಿ ಈ ಸ್ಲ್ಯಾಬ್‌ಗಳಿಂದ ತೀವ್ರ ಸಮಸ್ಯೆ ಉಂಟಾಗಿದೆ.

ಈ ಹಿಂದೆ ಬಾಲರಾಜ ಅರಸ್ ರಸ್ತೆಯಲ್ಲಿ ಸ್ಲ್ಯಾಬ್‌ಗಳು ಹಾನಿಯಾಗಿ ರಸ್ತೆಯ ಎರಡು ಬದಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಕುರಿತು ಶಿವಮೊಗ್ಗ ಲೈವ್.ಕಾಂ ನಿರಂತರ ವರದಿ ಪ್ರಕಟಿಸಿದ ಬೆನ್ನಿಗೆ ರಿಪೇರಿ ಕಾರ್ಯ ನಡೆಸಲಾಗಿತ್ತು. ಆದರೆ ಈಗ ಪುನಃ ಸಮಸ್ಯೆ ತಲೆ ಎತ್ತಿದೆ.
ಇದನ್ನೂ ಓದಿ » ಹಿಂದೂ ಮಹಾಸಭಾ ಮೆರವಣಿಗೆ, ಮಫ್ತಿಯಲ್ಲಿದ್ದ ಮಹಿಳಾ ಪೊಲೀಸ್ ಮಾಂಗಲ್ಯ ಸರ ನಾಪತ್ತೆ