ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
GOOD MORNING SHIMOGA, 27 SEPTEMBER 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಧೈರ್ಯಶಾಲಿಯಾಗಲು ಪ್ರಾರಂಭಿಸಿದಾಗ, ನಿಮ್ಮ ಶಕ್ತಿ ಮತ್ತು ಚಾಣಾಕ್ಷತೆ ತಾವಾಗಿಯೇ ಹೆಚ್ಚಾಗುತ್ತದೆ
» ಇವತ್ತಿನ ದಿನ ಭವಿಷ್ಯ ಓದಲು ಇಲ್ಲಿ ಕ್ಲಕ್ ಮಾಡಿ
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಬಿಸಿಲಿನ ಝಳ ಮತ್ತು ಚಳಿ ಪ್ರಮಾಣ ನಿಧಾನವಾಗಿ ಹೆಚ್ಚಾಗುತ್ತಿದೆ. ಇವತ್ತು ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಗರಿಷ್ಠ 28 ಡಿಗ್ರಿ, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಗರಿಷ್ಠ 29 ಡಿಗ್ರಿ, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನ, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 30 ಡಿಗ್ರಿ, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನು, ಜಿಲ್ಲೆಯ ವಿವಿಧೆಡೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.ಜಿಲ್ಲೆಯಲ್ಲಿ ಬಿಸಿಲು ಝಳ, ಚಳಿ ತುಸು ಹೆಚ್ಚಳ
ಇದನ್ನೂ ಓದಿ » ಕಡಿಮೆಯಾದ ಮಳೆ, ಹಿಂಗಾರು ಆರಂಭದ ದಿನಾಂಕ ಘೋಷಿಸಿದ ಹಾವಾಮಾನ ಇಲಾಖೆ
ಕೋಟೆಗಂಗೂರು : ನಿರ್ಮಾಣ ಹಂತದ ರೈಲ್ವೆ ಕೋಚಿಂಗ್ ಟರ್ಮಿನಲ್‌ಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಸಂಸದ ರಾಘವೇಂದ್ರ ಭೇಟಿ. ಕಾಮಗಾರಿ ಸ್ಥಳ ಪರಿಶೀಲನೆ. ಗುಣಮಟ್ಟದ ಕಾಮಗಾರಿಗೆ ಸೂಚನೆ. ಜಿಲ್ಲಾ ಪಂಚಾಯಿತಿ ಸಭಾಂಗಣ : ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಭೆ. ಸಂಸದ ರಾಘವೇಂದ್ರ, ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಭಾಗಿ. ಪ್ರಮುಖ ವಿಚಾರಗಳ ಚರ್ಚೆ. ಜಿಲ್ಲಾಧಿಕಾರಿ ಕಚೇರಿ : ಕುಲಾಂತರಿ ಬೆಳೆಗೆ ಸಂಬಂಧಿಸಿದ ರಾಷ್ಟ್ರೀಯ ನೀತಿಯ ಕುರಿತು ಮುಕ್ತ ಸಭೆಗಳನ್ನು ನಡೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ. ಗಾಂಧಿ ಪಾರ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ – ಜೆಡಿಎಸ್ ಪಕ್ಷಗಳ ಷಡ್ಯಂತ್ರ ವಿರೋಧಿಸಿ, ಸಿಎಂಗೆ ಬೆಂಬಲ ಸೂಚಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ. ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ. ತಾಲೂಕು ಕಚೇರಿ : ವೇತನ ಶ್ರೇಣಿ ನಿಗದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದಿಂದ ಪ್ರತಿಭಟನೆ.ಶಿವಮೊಗ್ಗ ಸಿಟಿ ನ್ಯೂಸ್
ಶಿಕಾರಿಪುರ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ – ಜೆಡಿಎಸ್‌ನಿಂದ ಷಡ್ಯಂತ್ರ ಖಂಡಿಸಿ ಅಹಿಂದ ಯುವ ವೇದಿಕೆ ಕರೆ ನೀಡಿದ್ದ ಶಿಕಾರಿಪುರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ. ಪಟ್ಟಣದಲ್ಲಿ ಅಹಿಂದ ಮುಖಂಡರಿಂದ ಪ್ರತಿಭಟನೆ. ಭದ್ರಾವತಿ : ಜಲಜಾಗೃತಿ ಮತ್ತು ಜನ ಜಾಗೃತಿ ಮೂಡಿಸಲು ಸೆ.30 ರಂದು ಬೆಳಗ್ಗೆ 7.30ಕ್ಕೆ ಭದ್ರಾ ನದಿಯಿಂದ ಗಂಗಾವತಿಯ ಕಿಷ್ಕಿಂದೆವರೆಗೆ ಪಾದಯಾತ್ರೆ ನಡೆಸಲು ತೀರ್ಮಾನ. ಸಾಗರ : ಸೆ.28 ರಿಂದ ಸೆ.30ರವರೆಗೆ ಹಿರಿಯ ರಂಗಕರ್ಮಿ ಹಾ.ಮ.ಭಟ್ಟ ನೆನಪಿನ ಹಬ್ಬ. ತುಮರಿ ಶಾಂತವೇರಿ ಗೋಪಾಲಗೌಡ ಸಭಾಂಗಣದಲ್ಲಿ ಗೋಪಾಲ ಗೌಡರ ಜನ್ಮಶತಮಾನೋತ್ಸವ ಹಿನ್ನೆಲೆ ವಿಚಾರ ಸಂಕಿರಣ. ಶಂಕರಘಟ್ಟ : ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಹ್ಯಾದ್ರಿ ಸಡಗರ ಉತ್ಸವಕ್ಕೆ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಚಾಲನೆ ನೀಡಿದರು. ಶಿಕಾರಿಪುರ : ಶಿವಮೊಗ್ಗ – ಶಿಕಾರಿಪುರ ರೈಲ್ವೆ ಮಾರ್ಗದ ಕಾಮಗಾರಿ ಪರಿಶೀಲನೆ ನಡೆಸಿ, ಅಧಿಕಾರಿಗಳ ಜೊತೆ ಸಭೆ ನಡೆಸಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ.ತಾಲೂಕು ಸುದ್ದಿಗಳು