ಶಿವಮೊಗ್ಗ ಲೈವ್
WEATHER REPORT, 2 OCTOBER 2024 : ಶಿವಮೊಗ್ಗದ ವಿವಿಧೆಡೆ ಮಂಗಳವಾರ ಸಾಧಾರಣ ಮಳೆಯಾಗಿದೆ. ಇದರಿಂದ ವಾತಾವರಣ ತುಸು ತಂಪೇರಿದಂತಾಗಿದೆ. ಆದರೆ ಬಿಸಿಲಿನ ಝಳವು ಹೆಚ್ಚಿದೆ. ಇದರಿಂದ ತಾಪಾಮಾನ ಏರಿದೆ. (ಈ ಸುದ್ದಿಯನ್ನು ಇನ್ನು 35 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 32 ಡಿಗ್ರಿ, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ತೀರ್ಥಹಳ್ಳಿಯಲ್ಲಿ ಗರಿಷ್ಠ 31 ಡಿಗ್ರಿ, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23 ಡಿಗ್ರಿ ಸಲ್ಸಿಯಸ್ ತಾಪಮಾನ ಇರಲಿದೆ.
ಜಿಲ್ಲೆಯ ವಿವಿಧೆಡೆ ಇವತ್ತೂ ತುಂತುರು ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ರಾತ್ರಿ ವೇಳೆ ತಂಪು ವಾತಾವರಣ ಇರಲಿದೆ.
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೆಳ್ಳುಳ್ಳಿಗಾಗಿ ಅಧಿಕಾರಿಗಳ ದಾಳಿ, ಸ್ಯಾಂಪಲ್ ಸಂಗ್ರಹ
