ಶೆಡ್‌ ನಿರ್ಮಾಣದ ವೇಳೆ ಕರೆಂಟ್‌ ಶಾಕ್‌, ಯುವಕ ಕೊನೆಯುಸಿರು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

HOLEHONNURU NEWS, 3 OCTOBER 2024 : ತಗಡಿನ ಶೆಡ್‌ (Shed) ನಿರ್ಮಾಣದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಯುವಕ ಮೃತಪಟ್ಟಿದ್ದಾನೆ. ಆನವೇರಿಯ ಹನುಮಂತಾಪುರದ ಲಲಿತಾಬಾಯಿ ಕೃಷ್ಣೋಜಿ ರಾವ್‌ ಅವರ ಮಗ ರಕ್ಷಿತ್ (22) ಮೃತ.

ಆನವೇರಿಯ ಕೆ.ಕೆ ರಸ್ತೆಯಲ್ಲಿ ರಕ್ಷಿತ್, ತನ್ನ ಚಿಕ್ಕಪ್ಪನ ಮಗನೊಂದಿಗೆ ಸೇರಿ ಹೊಸದಾಗಿ ಮಿಲ್ಟ್ರಿ ಹೋಟೆಲ್ ಶೆಡ್ ನಿರ್ಮಿಸಿದ್ದಾನೆ. ಬುಧವಾರ ಶೆಡ್‌ಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವಾಗ ಆಕಸ್ಮಿಕವಾಗಿ 11 ಕೆ.ವಿ ವಿದ್ಯುತ್ ತಂತಿ ತಗುಲಿ ಅಸ್ವಸ್ಥನಾಗಿದ್ದಾನೆ. ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಿ ಯುವಕ ಸಾವಿಗೀಡಾಗಿದ್ದಾನೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

anaveri-youht-succumbed-due-to-shock.

ಇದನ್ನೂ ಓದಿ » ಚೋರಡಿ ಬಳಿ ಬೈಕ್‌ಗೆ ಓಮ್ನಿ ಡಿ*ಕ್ಕಿ | ಉಂಬ್ಳೆಬೈಲಿನಲ್ಲಿ ಬೈಕುಗಳು ಮುಖಾಮುಖಿ ಡಿ*ಕ್ಕಿ – 3 ಫಟಾಫಟ್‌ ಸುದ್ದಿ

Leave a Comment