ಶಿವಮೊಗ್ಗದಲ್ಲಿ ರಾತ್ರಿ ಪೂರ್ತಿ ಗುಡುಗು, ಮಳೆ ಅಬ್ಬರ, ಇವತ್ತೂ ಅಲರ್ಟ್‌ ಪ್ರಕಟ

SHIMOGA NEWS, 9 OCTOBER 2024 : ಜಿಲ್ಲೆಯಾದ್ಯಂತ ಮಂಗಳವಾರ ಭಾರಿ ಮಳೆಯಾಗಿದೆ. ಗುಡುಗು, ಮಿಂಚು ಸಹಿತ ರಾತ್ರಿ ಪೂರ್ತಿ ಮಳೆ (Rain) ಅಬ್ಬರಿಸಿದೆ. ಇನ್ನೊಂದೆಡೆ ಇವತ್ತು ಕೂಡ ಜೋರು ಮಳೆಯಾಗುವ ಸಾಧ್ಯತೆ ಇದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಮಳೆ ಆರಂಭವಾಯಿತು. ರಾತ್ರಿ ಗುಡುಗು ಸಹಿತ ಹಿಂಗಾರು ಅಬ್ಬರ ಜೋರಾಗಿತ್ತು. ವಿವಿಧೆಡೆ ರಸ್ತೆ ಮೇಲೆ ಭಾರಿ ಪ್ರಮಾಣ ನೀರು ಹಿರಿಯುತ್ತಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಸ್ಥಳೀಯರು ಆತಂಕಕ್ಕೀಡಾಗಿದ್ದರು. ಇನ್ನು, ಜಿಲ್ಲೆಯ ವಿವಿಧೆಡೆಯ ಭಾರಿ ಮಳೆ ಅಬ್ಬರಿಸಿದೆ.

Rain-in-Shimoga-city-night.

ಇವತ್ತು ಕೂಡ ಮಳೆ ಅಬ್ಬರ

ಇಂದು ಕೂಡ ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ. ಇನ್ನು ಮೂರು ಗಂಟೆಯಲ್ಲಿ ಶಿವಮೊಗ್ಗ, ಹಾವೇರಿ, ಗದಗ, ಧಾರವಾಡ, ದಾವಣಗೆರೆ, ದಕ್ಷಿಣ ಕನ್ನಡ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ವಿಭಾಗ ಬೆಳಗ್ಗೆ 7 ಗಂಟೆ ಹೊತ್ತಿಗೆ ಅಲರ್ಟ್‌ ಪ್ರಕಟಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ » ಜನಶತಾಬ್ದಿ ರೈಲು ಹತ್ತುವ ಆತುರ, ಜಾರಿ ಬಿದ್ದು ತಿರುಚಿತು ವ್ಯಕ್ತಿಯ ಕಾಲು

Leave a Comment