ಶಿವಮೊಗ್ಗದಿಂದ ಯಾವೆಲ್ಲ ವಿಮಾನ ಎಷ್ಟೊತ್ತಿಗೆ ಹೊರಡುತ್ತವೆ? ಇಲ್ಲಿದೆ ಟೈಮ್‌ ಟೇಬಲ್‌

SHIMOGA NEWS, 10 OCTOBER 2024 : ವಿಮಾನ ನಿಲ್ದಾಣ ಆರಂಭವಾಗಿ ಎರಡೇ ವರ್ಷಕ್ಕೆ ಶಿವಮೊಗ್ಗದಿಂದ ಮೂರು ರಾಜ್ಯಕ್ಕೆ ವಿಮಾನಯಾನ ಸೇವೆ ಆರಂಭವಾಗಿದೆ (Time Table). ಮೂರು ಪ್ರಮುಖ ವಿಮಾನಯಾನ ಸಂಸ್ಥೆಗಳು ಇಲ್ಲಿ ಕಾರ್ಯಾಚರಿಸುತ್ತಿವೆ. ಮುಂದೆ ದೆಹಲಿ, ಮುಂಬೈಗು ವಿಮಾನ ಹಾರಾಟಕ್ಕೆ ಸಿದ್ಧತೆ ನಡೆಯುತ್ತಿದೆ.

ಮೂರು ವಿಮಾನಯಾನ ಸಂಸ್ಥೆಗಳು

ಬೆಂಗಳೂರು – ಶಿವಮೊಗ್ಗ – ಬೆಂಗಳೂರು ಮಾರ್ಗದಲ್ಲಿ ಇಂಡಿಗೊ ಸಂಸ್ಥೆ ವಿಮಾನಯಾನ ಸೇವೆ ಒದಗಿಸುತ್ತಿದೆ. 2023ರ ಆಗಸ್ಟ್‌ 31ರಿಂದ ಇಂಡಿಗೋ ವಿಮಾನ ಹಾರಾಟ ಆರಂಭವಾಯಿತು.

ಶಿವಮೊಗ್ಗದಿಂದ ಹೈದರಾಬಾದ್‌, ತಿರುಪತಿ, ಗೋವಾಕ್ಕೆ ಸ್ಟಾರ್‌ ಏರ್‌ ಸಂಸ್ಥೆ ಸಂಪರ್ಕ ಕಲ್ಪಿಸುತ್ತಿದೆ. 2023ರ ನವೆಂಬರ್‌ 21ರಂದು ಸ್ಟಾರ್‌ ಏರ್‌ ಸೇವೆ ಆರಂಭಿಸಿತು.

First Flight - Indigo ATR 72 Flight in Shimoga Airport

ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್‌ಗೆ ಸ್ಪೈಸ್‌ ಜೆಟ್‌ ವಿಮಾನಯಾನ ಸೇವೆ ಆರಂಭವಾಗಿದೆ. ಅ.10ರಿಂದ ಈ ವಿಮಾನ ಹಾರಾಟ ನಡೆಸುತ್ತಿದೆ. ಸದ್ಯ ಮಂಗಳವಾರ ಹೊರತು ಉಳಿದ ದಿನಗಳು ವಿಮಾನ ಹಾರಾಟ ನಡೆಸಲಿದೆ.

Kalleshwara-Enterprises.webp

s8

ಶಿವಮೊಗ್ಗ ನಿಲ್ದಾಣದ ವಿಮಾನಗಳ ಟೈಮಿಂಗ್‌

ಪ್ರತಿದಿನ ಮೂರು ವಿಮಾನಗಳು ಶಿವಮೊಗ್ಗದಿಂದ 12 ಟ್ರಿಪ್‌ ಹಾರಾಟ ನಡೆಸುತ್ತಿವೆ. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆಯು ಇದೆ. ಯಾವೆಲ್ಲ ವಿಮಾನಗಳು ಎಷ್ಟೊತ್ತಿಗೆ ಬರುತ್ತವೆ? ಎಷ್ಟು ಹೊತ್ತಿಗೆ ಇಲ್ಲಿಂದ ಹಾರಾಡುತ್ತವೆ. ಇಲ್ಲಿದೆ ಲಿಸ್ಟ್‌

Star-Air-begins-operation-from-Shimoga

ಶಿವಮೊಗ್ಗಕ್ಕೆ ಆಗಮನದ ಸಮಯ

ಹೈದರಾಬಾದ್‌ – ಶಿವಮೊಗ್ಗ | ಸ್ಟಾರ್‌ ಏರ್‌ | ಬೆಳಗ್ಗೆ 9.30ಕ್ಕೆ ಹೈದರಾಬಾದ್‌ನಿಂದ ಹೊರಟು ಬೆಳಗ್ಗೆ 10.50ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ಚೆನ್ನೈ – ಶಿವಮೊಗ್ಗ | ಸ್ಪೈಸ್‌ ಜೆಟ್‌ |ಬೆಳಗ್ಗೆ 10.40ಕ್ಕೆ ಚೆನ್ನೈನಿಂದ ಹೊರಟು ಮಧ್ಯಾಹ್ನ 12.10ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ಬೆಂಗಳೂರು – ಶಿವಮೊಗ್ಗ | ಇಂಡಿಗೋ | ಮಧ್ಯಾಹ್ನ 12.15ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.25ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ತಿರುಪತಿ – ಶಿವಮೊಗ್ಗ | ಸ್ಟಾರ್‌ ಏರ್‌ | ಮಧ್ಯಾಹ್ನ 1 ಗಂಟೆಗೆ ತಿರುಪತಿಯಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ಹೈದರಾಬಾದ್‌ – ಶಿವಮೊಗ್ಗ | ಸ್ಪೈಸ್‌ ಜೆಟ್‌ | ಮಧ್ಯಾಹ್ನ 2.40ಕ್ಕೆ ಹೈದರಾಬಾದ್‌ನಿಂದ ಹೊರಟು ಸಂಜೆ 4 ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ಗೋವಾ – ಶಿವಮೊಗ್ಗ | ಸ್ಟಾರ್‌ ಏರ್‌ | ಮಧ್ಯಾಹ್ನ 3.50ಕ್ಕೆ ಗೋವಾದಿಂದ ಹೊರಟು ಸಂಜೆ 4.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ಶಿವಮೊಗ್ಗದಿಂದ ಹೊರಡುವ ಸಮಯ

ತಿರುಪತಿ | ಸ್ಟಾರ್‌ ಏರ್‌ | ಬೆಳಗ್ಗೆ 11.20ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಿರ್ಗಮಿಸಲಿದೆ.

ಹೈದರಾಬಾದ್‌ | ಸ್ಪೈಸ್‌ ಜೆಟ್‌ | ಮಧಾಹ್ನ 12.35ಕ್ಕೆ ಶಿವಮೊಗ್ಗದಿಂದ ನಿರ್ಗಮಿಸಲಿದೆ.

ಬೆಂಗಳೂರು | ಇಂಡಿಗೋ | ಮಧ್ಯಾಹ್ನ 1.45ಕ್ಕೆ ಶಿವಮೊಗ್ಗದಿಂದ ನಿರ್ಗಮಿಸಲಿದೆ.

ಗೋವಾ | ಸ್ಟಾರ್‌ ಏರ್‌ | ಮಧ್ಯಾಹ್ನ 2.30ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಿರ್ಗಮಿಸಲಿದೆ.

ಚೆನ್ನೈ | ಸ್ಪೈಸ್‌ ಜೆಟ್‌ | ಸಂಜೆ 4.25ಕ್ಕೆ ಶಿವಮೊಗ್ಗದಿಂದ ನಿರ್ಗಮನ.

ಹೈದರಾಬಾದ್‌ | ಸ್ಟಾರ್‌ ಏರ್‌ | ಸಂಜೆ 5.10ಕ್ಕೆ ಶಿವಮೊಗ್ಗದಿಂದ ನಿರ್ಗಮನ.

ಇದನ್ನೂ ಓದಿ » ದಾಖಲೆ ನಿರ್ಮಿಸಿದ ಶಿವಮೊಗ್ಗ ವಿಮಾನ ನಿಲ್ದಾಣ, ಏನದು?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment