SHIMOGA NEWS, 10 OCTOBER 2024 : ದಸರಾ ಹಬ್ಬದ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ (lighting) ಮಾಡಲಾಗಿದೆ. ಎಲ್ಲಾ ಮುಖ್ಯ ರಸ್ತೆಗಳೂ ಬಣ್ಣ ಬಣ್ಣದ, ವಿವಿಧ ಡಿಸೈನ್‌ನ ದೀಪಗಳಿಂದ ಕಂಗೊಳಿಸುತ್ತಿದೆ.
ತುಂಗಾ ಸೇತುವೆ, ಬಿ.ಹೆಚ್.ರಸ್ತೆ, ಶಿವಪ್ಪನಾಯಕ ಪ್ರತಿಮೆ, ಎ.ಎ.ಸರ್ಕಲ್, ನೆಹರೂ ರಸ್ತೆ, ಬಾಲರಾಜ ಅರಸ್ ರಸ್ತೆ, ಕುವೆಂಪು ರಂಗ ಮಂದಿರ ಮುಂಭಾಗದ ರಸ್ತೆ, ದುರ್ಗಿಗುಡಿ, ಕುವೆಂಪು ರಸ್ತೆ, ಸವಳಂಗ ರಸ್ತೆ, ಜೈಲ್ ರೋಡ್, ನೂರು ಅಡಿ ರಸ್ತೆ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈ ಬಾರಿ ಶಿವಮೊಗ್ಗ ದಸರಾದ ವಿದ್ಯುತ್ ದಿಪಾಲಂಕಾರದ ಜವಾಬ್ದಾರಿಯನ್ನು ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ನಿರ್ವಹಿಸುತ್ತಿದೆ. ‘ಮಹಾನಗರ ಪಾಲಿಕೆ ವತಿಯಿಂದ ದೀಪಾಲಂಕಾರದ ಖರ್ಚು ವೆಚ್ಚ ನಿರ್ವಹಿಸುತ್ತೆ ತಿಳಿಸಿದ್ದರು. ಅದರಂತೆ ಈ ಬಾರಿ ನಗರದಲ್ಲಿ ದೀಪಾಲಂಕಾರ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ’ ಎಂದು ಸೂಡ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ » ಆಯುಧ ಪೂಜೆ, ಶಿವಮೊಗ್ಗದಲ್ಲಿ ಹೂವು, ಹಣ್ಣು, ಕುಂಬಳಕಾಯಿ ಖರೀದಿ ಜೋರು