BHADRAVATHI NEWS, 30 OCTOBER 2024 : ಮೊಬೈಲ್ಗೆ ಬಂದ ಮೆಸೇಜ್ ಕ್ಲಿಕ್ ಮಾಡಿದ ವ್ಯಕ್ತಿಯ ಬ್ಯಾಂಕ್ (BANK) ಖಾತೆಯಿಂದ ಮೂರು ಬಾರಿ ಹಣ ವರ್ಗಾವಣೆಯಾಗಿದೆ. ಭದ್ರಾವತಿ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದೆ.
ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ತಮ್ಮ ಮೊಬೈಲ್ನಲ್ಲಿ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡುತ್ತಿದ್ದರು. ಆಗ ಫೋನ್ ಪೇ ಪ್ರೊಸೀಡ್ ಎಂಬ ಮೆಸೇಜ್ ಬಂದಿತ್ತು. ಅದನ್ನು ಕ್ಲಿಕ್ ಮಾಡಿದ್ದರು. ಆ ನಂತರ ಆ ವ್ಯಕ್ತಿಗೆ ತಿಳಿಯದೆಯೇ ಮೂರು ಬಾರಿ ನಾನಾ ಖಾತೆಗೆ ಒಟ್ಟು 2.58 ಲಕ್ಷ ರೂ. ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ವಿದ್ಯುತ್ ಶಾಕ್, ಅಂಗಡಿ ಮಾಲೀಕ ಸಾವು