ಶಿವಮೊಗ್ಗಕ್ಕೆ ಮತ್ತೊಂದು ಕಾರು ಶೋ ರೂಂ, ಮಲೆನಾಡಿಗೆ ಇಸೂಝು ಎಂಟ್ರಿ

SHIMOGA NEWS, 10 NOVEMBER 2024 : ಜಪಾನ್‌ ಮೂಲದ ಇಸೂಝು ಆಟೊಮೊಬೈಲ್‌ ಸಂಸ್ಥೆಯು ಶಿವಮೊಗ್ಗ ನಗರದಲ್ಲಿ ಶಾಖೆ (Showroom) ಆರಂಭಿಸಿದೆ. ಗಾಡಿಕೊಪ್ಪದ ಲಕ್ಷ್ಮಿ ರೈಸ್‌ ಕಾಂಪೌಂಡ್‌ನಲ್ಲಿ ರೈನ್‌ ಲ್ಯಾಂಡ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಇಸೂಝು ಶೋ ರೂಂ ಆರಂಭವಾಗಿದೆ.

ಇಸೂಝು ಸಂಸ್ಥೆಯ ಡೆಪ್ಯೂಟಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಟೊರು ಕಿಶಿಮೋಟೊ, ಉಪಾಧ್ಯಕ್ಷ ಕೀ ಯಮಝಾಕಿ ಮತ್ತು ಪ್ರಧಾನ ವ್ಯವಸ್ಥಾಪಕ ವೇಣುಗೋಪಾಲ್‌ ಟಣಾಂಕಿ ಶೋ ರೂಂ ಉದ್ಘಾಟಿಸಿರು. ಉದ್ಯಮಿ ಇಬ್ರಾಹಿಂ ಶರೀಫ್‌ ಅವರು ಡೀಲರ್‌ಶಿಪ್‌ ಪಡೆದುಕೊಂಡಿದ್ದಾರೆ.

ವಿವಿಧ ಮಾದರಿಯ ವಾಹನಗಳು

ಉತ್ತರ ಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಜಿಲ್ಲೆಗಳ್ನು ಕೇಂದ್ರೀಕರಿಸಿಕೊಂಡು ಶಿವಮೊಗ್ಗದಲ್ಲಿ ಶೋ ರೂಂ ಸ್ಥಾಪಿಸಲಾಗಿದೆ. ಇಲ್ಲಿ ಐದಕ್ಕು ಹೆಚ್ಚು ಮಾದರಿಯ ಸರಕು ಸಾಗಣೆ ಮತ್ತು ಪ್ರಯಾಣಿಕರ ವಾಹನಗಳನ್ನು ಲಭ್ಯವಿವೆ. ಮ್ಯಾನುಯಲ್‌, ಆಟೊಮ್ಯಾಟಿಕ್‌ ಮಾದರಿಯ ವಾಹನಗಳು ಇಲ್ಲಿ ದೊರೆಯಲಿದೆ.Isuzu Car Showroom Rainlad in Shimoga

ಇದನ್ನೂ ಓದಿ » ಪರಿಶಿಷ್ಟ ಪಂಗಡದವರಿಗೆ ವಿವಿಧ ಯೋಜನೆಗೆ ಅರ್ಜಿ ಆಹ್ವಾನ

ಇಸೂಝು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ವೆಂಕಟೇಶ ಶೆಟ್ಟಿ, ನಿರ್ದೇಶಕ ಇಬ್ರಾಹಿಂ ಶರೀಫ್‌, ಸಾಲಿನ್‌ ಅನೂಪ್‌, ಅಬ್ದುಲ್‌ ರೆಹಮಾನ್‌, ಸಲ್ಮಾನ್‌ ಹಿಲ್‌ ಫಾರೀಶ್‌ ಸೇರಿದಂತೆ ಹಲವರು ಇದ್ದರು.

Isuzu Car Showroom Rainlad in Shimoga

091124 Rainland Isuzu Showroom inaugurated in Shimoga

Leave a Comment