ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 18 NOVEMBER 2024 : ನ.21 ರಿಂದ 29ರವರೆಗೆ ನವುಲೆಯ ಕೆಎಸ್‌ಸಿಎ ಮತ್ತು ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ 15 ವರ್ಷ ವಯೋಮಿತಿಯೊಳಗಿನ ಅಂತಾರಾಜ್ಯ ಮಹಿಳಾ ಕ್ರಿಕೆಟ್ (Cricket) ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂಲಸೌಕರ್ಯ ಅಭಿವೃದ್ಧಿ ಸಮಿತಿ ಸಂಚಾಲಕ ಡಿ.ಎಸ್.ಅರುಣ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಎಸ್.ಅರುಣ್, ನ.21ರಂದು ಬೆಳಗ್ಗೆ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಜೆಎನ್‌ಎನ್‌ಸಿಇ ಮೈದಾದನಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಉದ್ಘಾಟಿಸಲಿದ್ದಾರೆ ಎಂದರು.
ಶಿವಮೊಗ್ಗದಲ್ಲಿ ಎ ಗುಂಪಿನ ಪಂದ್ಯಗಳು
ಕ್ರಿಕೆಟ್ ಪಂದ್ಯಾವಳಿಗೆ ವಿವಿಧ ರಾಜ್ಯಗಳ 36 ತಂಡಗಳು ಭಾಗವಹಿಸುತ್ತಿವೆ. ಈ ತಂಡಗಳನ್ನು ತಲಾ ಆರು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನ ಪಂದ್ಯಾವಳಿಗಳು ಶಿವಮೊಗ್ಗದ ಕೆಎಸ್‌ಸಿಎ ಮತ್ತು ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದರು.
ಎ ಗುಂಪಿನಲ್ಲಿ ಬಿಹಾರ, ತಮಿಳುನಾಡು, ಹರಿಯಾಣ, ಕೇರಳ, ನಾಗಾಲ್ಯಾಂಡ್, ಹೈದರಾಬಾದ್ ತಂಡಗಳು ಇರಲಿವೆ. ಪ್ರತಿದಿನ ಮೂರು ಪಂದ್ಯಾವಳಿಯಂತೆ ಒಟ್ಟು 15 ಪಂದ್ಯಗಳು ನಡೆಯಲಿವೆ. ಒಂದೊಂದು ತಂಡದ ಪಂದ್ಯಕ್ಕು ಮಧ್ಯೆ ಒಂದು ದಿನದ ವಿಶ್ರಾಂತಿ ಇರಲಿದೆ.
ಡಿ.ಎಸ್.ಅರುಣ್, ಕೆಎಸ್‌ಸಿಎ ಮೂಲಸೌಕರ್ಯ ಅಭಿವೃದ್ಧಿ ಸಮಿತಿ ಸಂಚಾಲಕ
ಬಿಳಿ ಬಣ್ಣದ ಬಾಲ್‌ನಲ್ಲಿ ಪಂದ್ಯಾವಳಿ ನಡೆಯಲಿದೆ. 35 ಓವರ್ ಮಿತಿ ಇರಲಿದೆ. ಬಿಸಿಸಿಐ ತೀರ್ಪುಗಾರರು, ಪಂದ್ಯ ವೀಕ್ಷಕರು, ರಾಷ್ಟ್ರೀಯ ಮಹಿಳಾ ತಂಡದ ಆಯ್ಕೆದಾರರು ಬರಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ » ಹತ್ತು ಪಟ್ಟು ಲಾಭಾಂಶ, ನಂಬಿದ ಇಂಜಿನಿಯರ್‌ಗೆ ಕಾದಿತ್ತು ಆಘಾತ
ಸುದ್ದಿಗೋಷ್ಠಿಯಲ್ಲಿ ವಲಯ ಸಂಚಾಲಕ ಹೆಚ್.ಎಸ್.ಸದಾನಂದ್, ವಲಯ ಅಧ್ಯಕ್ಷ ಎನ್.ರಾಜೇಂದ್ರ ಕಾಮತ್, ಮಾಜಿ ವಲಯ ಸಂಚಾಲಕ ಡಿ.ಆರ್.ನಾಗರಾಜ್, ಅಂಪೈರ್ ಸುಬ್ರಹ್ಮಣ್ಯ, ಮಾಧ್ಯಮ ಪ್ರಮುಖ ಗೋಪಾಲಕೃಷ್ಣ ಇದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422