ತುಂಗಾ ನದಿಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಶವವಾಗಿ ಪತ್ತೆ

THIRTHAHALLI NEWS, 20 NOVEMBER 2024 : ಮೊಬೈಲ್‌ ಮತ್ತು ಚಪ್ಪಲಿ ಬಿಟ್ಟು ನಾಪತ್ತೆಯಾಗಿದ್ದ ಬ್ಯಾಂಕ್‌ ಮ್ಯಾನೇಜರ್‌ (Manager) ಶವವಾಗಿ ಪತ್ತೆಯಾಗಿದ್ದಾರೆ. ತುಂಗಾ ನದಿಯಲ್ಲಿ ಅವರ ಮೃತದೇಹ ಸಿಕ್ಕಿದೆ.

ತೀರ್ಥಹಳ್ಳಿ ತಾಲೂಕು ಅರಳಸುರಳಿಯ ಯುನಿಯನ್‌ ಬ್ಯಾಂಕ್‌ ಮ್ಯಾನೇಜರ್‌ ಶ್ರೀವತ್ಸ (38) ಮೃತರು.

ತುಂಗಾ ನದಿ ದಡದಲ್ಲಿ ಮೊಬೈಲ್‌ ಮತ್ತು ಚಪ್ಪಲಿ ಪತ್ತೆಯಾಗಿತ್ತು. ಮೊಬೈಲ್‌ ಪರಿಶೀಲಿಸಿದಾಗ ಶ್ರೀವತ್ಸ ಅವರಿಗೆ ಸೇರಿದ್ದು ಎಂದು ಗೊತ್ತಾಗಿತ್ತು. ಚಪ್ಪಲಿ ಮತ್ತು ಮೊಬೈಲ್‌ ದಡದ ಮೇಲೆ ಬಿಟ್ಟು ತುಂಗಾ ನದಿಯಲ್ಲಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ಹಾಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇವತ್ತು ‍ಮ್ಯಾನೇಜರ್‌ ಶ್ರೀವತ್ಸ ಅವರ ಮೃತದೇಹ ಪತ್ತೆಯಾಗಿದೆ. ತೀರ್ಥಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Bank-Manager-found-in-tunga-river-at-thirthahalli

ಇದನ್ನೂ ಓದಿ » ಶಿವಮೊಗ್ಗದಲ್ಲಿ ಥಂಡಿ ವಾತಾವರಣ, ಇವತ್ತು ಎಷ್ಟಿರುತ್ತೆ ತಾಪಮಾನ?

Manager

Bank-Manager-found-in-tunga-river-at-thirthahalli

Leave a Comment