ಶಿವಮೊಗ್ಗ ಲೈವ್
NATIONAL NEWS : ಇನ್ಮುಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯು ನಂದಿನಿ (Nandini) ಉತ್ಪನ್ನಗಳು ದೊರೆಯಲಿದೆ. ದೆಹಲಿಯಲ್ಲಿ ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಶ್ರೇಣಿಯ ಹಾಲಿನ ಪ್ಯಾಕೆಟ್ಗಳನ್ನು ಬಿಡುಗಡೆ ಮಾಡಿ ಮಾರಾಟಕ್ಕೆ ಚಾಲನೆ ನೀಡಿದರು. (ಈ ಸುದ್ದಿಯನ್ನು ಇನ್ನು 31 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ದೆಹಲಿಯಲ್ಲಿ ಪ್ರತಿದಿನ 1 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿ ಹೊಂದಲಾಗಿದೆ. ಇನ್ನು ಆರು ತಿಂಗಳ ಒಳಗೆ 2.5 ಲಕ್ಷ ಲೀಟರ್ ಹಾಲು ಮಾರಾಟಕ್ಕೆ ಯೋಜಿಸಲಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ವಿತರಕರ ಜೊತೆಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಒಪ್ಪಂದ ಮಾಡಿಕೊಂಡಿದೆ.
ಈಗಾಗಲೇ ನಂದಿನಿ ಬ್ರ್ಯಾಂಡ್ನ ಹಾಲು ಮತ್ತು ಹಾಲಿನ ಉತ್ಪನ್ನಗಳು ಮುಂಬೈ, ನಾಗಪುರ, ಪುಣೆ ಮತ್ತು ಸೋಲಾಪುರ, ಗೋವಾ, ಹೈದರಾಬಾದ್, ಚೆನ್ನೈ, ಕೇರಳದ ರಾಜ್ಯಗಳಲ್ಲಿ ಮಾರಾಟವಾಗುತ್ತಿವೆ.
