ಶಕ್ತಿ ಯೋಜನೆ, ಶಿವಮೊಗ್ಗದಲ್ಲಿ ಈವರೆಗೂ ಉಚಿತವಾಗಿ ಓಡಾಡಿದ ಮಹಿಳೆಯರೆಷ್ಟು?

SHIVAMOGGA LIVE NEWS, 3 DECEMBER 2024 (ಈ ಸುದ್ದಿಯನ್ನು ಇನ್ನು 69 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ (Shakti) ಯೋಜನೆ ಅಡಿ ಶಿವಮೊಗ್ಗ ವಿಭಾಗದಲ್ಲಿ ಈವರೆಗೆ 4 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಒಟ್ಟು ಪ್ರಯಾಣಿಕರ ಪೈಕಿ ಶೇ.60ರಷ್ಟು ಮಹಿಳೆಯರೆ ಪ್ರಯಾಣಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಎಷ್ಟು ಪ್ರಯಾಣಿಕರು?

ಶಿವಮೊಗ್ಗ ಕೆಎಸ್‌ಆರ್‌ಟಿಸಿ ವಿಭಾಗದ ಅಡಿ ಐದು ಡಿಪೋಗಳಿವೆ. ಶಿವಮೊಗ್ಗ, ಭದ್ರಾವತಿ, ಸಾಗರ, ಹೊನ್ನಾಳಿ ಮತ್ತು ಶಿಕಾರಿಪುರ ಡಿಪೋಗಳಿವೆ. ಶಿವಮೊಗ್ಗ ಮತ್ತು ಭದ್ರಾವತಿ ಡಿಪೋಗಳಿಂದಲೇ ಅತಿ ಹೆಚ್ಚು ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಲಾಭ ಪಡೆದಿದ್ದಾರೆ. 2023ರ ಜೂನ್‌ 11 ರಿಂದ 2024ರ ನವೆಂಬರ್‌ 18ರವರೆಗಿನ ರಿಪೋರ್ಟ್‌.

ಡಿಪೋಮಹಿಳಾ ಪ್ರಯಾಣಿಕರುಇತರೆ ಪ್ರಯಾಣಿಕರು
ಶಿವಮೊಗ್ಗ1,32,04,37188,43,204
ಭದ್ರಾವತಿ1,02,54,77658,45,828
ಸಾಗರ69,86,42151,35,933
ಹೊನ್ನಾಳಿ63,90,13940,42,732
ಶಿಕಾರಿಪುರ36,95,12721,59,128
ಒಟ್ಟು4,05,30,8342,60,26,825

KSRTC-Bus-General-Image

ಇನ್ನೊಂದೆಡೆ ಶಕ್ತಿ ಯೋಜನೆ ನಡುವೆಯು ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗಕ್ಕೆ ಹೆಚ್ಚು ಆದಾಯ ಲಭಿಸಿದೆ ಎಂದು ಕೆಎಸ್‌ಆರ್‌ಟಿಸಿಯ ವರದಿಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ವಿಭಾಗದಲ್ಲಿ ಮಹಿಳಾ ಪ್ರಯಾಣಿಕರಿಂದ 140 ಕೋಟಿ ರೂ. ವೆಚ್ಚವಾಗಿದೆ. ಇತರೆ ಪ್ರಯಾಣಿಕರಿಂದ 172 ಕೋಟಿ ರೂ. ಅದಾಯ ಬಂದಿದೆ.

ಡಿಪೋಶಕ್ತಿ ಯೋಜನೆ
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ

ಮಹಿಳೆಯರ ಆದಾಯ

ಇತರೆ ಪ್ರಯಾಣಿಕರ

ಆದಾಯ

ಶಿವಮೊಗ್ಗ45,09,47,02582,54,66,424
ಭದ್ರಾವತಿ25,86,64,34626,47,72,475
ಸಾಗರ31,60,20,08035,92,79,019
ಹೊನ್ನಾಳಿ21,08,52,64916,84,73,738
ಶಿಕಾರಿಪುರ17,09,28,03510,92,65,644
ಒಟ್ಟು140,74,12,135172,72,57,300

Shakthi-Yojane-Free-Ticket-of-women-in-Shimoga-KSRTC-Bus

ಒಟ್ಟು ಆದಾಯದಲ್ಲಿ ಶೇ.44ರಷ್ಟು ಶಕ್ತಿ ಯೋಜನೆಯ ಪಾಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ಹೊಳೆಹೊನ್ನೂರು ಬಳಿ ಎರಡು ಕಾರು, ಬೈಕ್‌ ಅಪಘಾತ

KSRTC Shakti Scheme

ksrtc-news-update-thumbnail.webp

Leave a Comment