ಶಿವಮೊಗ್ಗ ಲೈವ್
SHIVAMOGGA LIVE NEWS, 4 JANUARY 2024
ಶಿವಮೊಗ್ಗ : KSRTC ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದು ಮಧ್ಯರಾತ್ರಿಯಿಂದಲೆ ನೂತನ ದರ ಜಾರಿಗೆ ಬರಲಿದೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರಿಂದ ಶಿವಮೊಗ್ಗಕ್ಕೆ ಎಷ್ಟು ರೇಟ್?
» ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವೇಗದೂತ ಬಸ್ಸುಗಳ ಟಿಕೆಟ್ ದರ ಈ ಹಿಂದೆ 332 ರೂ. ಇತ್ತು. ಶೇ.15ರಷ್ಟು ಹೆಚ್ಚಳವಾಗಿರುವುದರಿಂದ ಟಿಕೆಟ್ ದರ 356 ರೂ.ಗೆ ತಲುಪಿದೆ. ಒಟ್ಟು 44 ರೂ. ಹೆಚ್ಚಳವಾಗಿವೆ.
![]()
» ಶಿವಮೊಗ್ಗದಿಂದ ಭದ್ರಾವತಿಗೆ ಎಕ್ಸ್ಪ್ರೆಸ್ ಬಸ್ಸುಗಳಲ್ಲಿ 28 ರೂ. ಇತ್ತು. ಇನ್ಮುಂದೆ 32 ರೂ.ಗೆ ತಲುಪಲಿದೆ. ಸಾಮಾನ್ಯ ಬಸ್ಸಿನಲ್ಲಿ ಪ್ರತಿ ಟಿಕೆಟ್ಗೆ 25 ರೂ. ಇತ್ತು. ಇನ್ಮುಂದೆ 29 ರೂ.ಗೆ ತಲುಪಲಿದೆ.
ಶಿವಮೊಗ್ಗದಿಂದ ಎಲ್ಲೆಲ್ಲಿಗೆ ಎಷ್ಟಿದೆ ದರ?
| ಶಿವಮೊಗ್ಗದಿಂದ | ಹಳೆ ದರ | ಹೊಸ ದರ |
| ಸಾಗರ | 72 ರೂ. | 82 ರೂ. |
| ಸೊರಬ | 101 ರೂ. | 116 ರೂ. |
| ಶಿಕಾರಿಪುರ | 62 ರೂ. | 71 ರೂ. |
| ತೀರ್ಥಹಳ್ಳಿ | 65 ರೂ. | 75 ರೂ. |
| ಹೊಸನಗರ | 65 ರೂ. | 75 ರೂ. |
| ಉಡುಪಿ | 158 ರೂ. | 182 ರೂ. |
| ದಾವಣಗೆರೆ | 101 ರೂ. | 116 ರೂ. |
| ಹೊನ್ನಾಳಿ | 50 ರೂ. | 57 ರೂ. |
| ಹರಿಹರ | 232 ರೂ. | 266 ರೂ. |
| ತರೀಕೆರೆ | 45 ರೂ. | 52 ರೂ. |
ಇದನ್ನೂ ಓದಿ » ಭದ್ರಾ ಡ್ಯಾಮ್ ನಾಲೆಗಳಿಗೆ ನೀರು ಹರಿಸುವ ದಿನಾಂಕ ಪ್ರಕಟ