SHIVAMOGGA LIVE NEWS, 6 JANUARY 2025
ಸಾಗರ : ಕನ್ನಡ ಸಾಹಿತ್ಯ ಲೋಕದ ಜೀವ‘ನಾಡಿ’ ಹಿರಿಯ ಸಾಹಿತಿ (Writer) ಡಾ. ನಾ.ಡಿಸೋಜ ನಿಧನರಾಗಿದ್ದಾರೆ. ಲೋಕೋಪಯೋಗಿ ಇಲಾಖೆಯ ಒತ್ತಡದ ಕೆಲಸದ ನಡುವೆಯು ನಾ.ಡಿಸೋಜ ಸಾಹಿತ್ಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಅವರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಲು ಎರಡು ಪ್ರಮುಖ ಘಟ್ಟಗಳು ಕಾರಣವಾಗಿದ್ದವು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಾ. ಡಿಸೋಜ ಅವರು ಹುಟ್ಟಿದ್ದು ಸಾಗರ ತಾಲೂಕಿನಲ್ಲಿ. 1937ರ ಜೂನ್ 6ರಂದು ಅವರ ಜನನವಾಯಿತು. ಡಾ. ನಾ.ಡಿಸೋಜ ಅವರ ಪೂರ್ಣ ಹೆಸರು ನಾಲ್ಬರ್ಟ್ ಡಿಸೋಜ. ತಂದೆ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಎಫ್.ಸಿ.ಡಿಸೋಜ ಅವರು ಸಾಗರದ ಚಾಮರಾಜಪೇಟೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು.
ತಂದೆ ಎಫ್.ಸಿ.ಡಿಸೋಜ ಶಾಲೆಯಲ್ಲಿ ಮಕ್ಕಳಿಗೆ ಕಲಿಸಲು ಹಲವು ಕವಿತೆಗಳನ್ನು ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದರು. ಆರು ವರ್ಷದ ನಾ.ಡಿಸೋಜ ಅವರು ಅಪ್ಪನ ಪುಸ್ತಕದಲ್ಲಿನ ಕವಿತೆಗಳನ್ನು ಓದಲು ಆರಂಭಿಸಿದರು. ‘ಇದು ತಾನು ಓದಿದ ಮೊದಲ ಪುಸ್ತಕ’ ಎಂದು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅವರಿಗೆ ನೀಡಿದ ಸಂದರ್ಶನದಲ್ಲಿ ನಾ.ಡಿಸೋಜ ಸ್ಮರಿಸಿಕೊಂಡಿದ್ದರು. ಇನ್ನು, ತಾಯಿ ರೂಪೀನಾ ಡಿಸೋಜ ಮಕ್ಕಳನ್ನು ಮಲಗಿಸುವಾಗ ಅನೇಕ ಜಾನಪದ ಕತೆಗಳನ್ನು ಹೇಳುತ್ತಿದ್ದರು. ಇದು ಸಾಹಿತ್ಯದ ಕುರಿತು ನಾ.ಡಿಸೋಜ ಅವರಲ್ಲಿ ಆಸಕ್ತಿ ಮೂಡಿಸಿತು.ಸಾಹಿತ್ಯ ಆಸಕ್ತಿ ಮೂಡಿಸಿದ ಘಟ್ಟ – 1
ನಾ.ಡಿಸೋಜ ಅವರಿಗೆ ಹತ್ತು ವರ್ಷ ಇದ್ದಾಗ ತಂದೆ ತೀರಿಕೊಂಡರು. ತಾಯಿಯ ಒಂಟಿತನ ನೀಗಿಸಲು ಅಣ್ಣ, ಅಕ್ಕಂದಿರು ಗ್ರಂಥಾಲಯದಿಂದ ಪುಸ್ತಕಗಳನ್ನು ತರುತ್ತಿದ್ದರು. ಆ ಪುಸ್ತಕಗಳನ್ನು ಓದಿ ತಾಯಿಗೆ ವಿವರಿಸಬೇಕು ಎಂದು ನಾ.ಡಿಸೋಜ ಅವರಿಗೆ ಅಕ್ಕ, ಅಣ್ಣಂದಿರು ಆದೇಶಿಸುತ್ತಿದ್ದರು. ಕತೆ, ಕಾದಂಬರಿಗಳನ್ನು ಓದಿ ತಾಯಿಗೆ ವಿವರಿಸುತ್ತಲೆ ಸಾಹಿತ್ಯದ ಪರಿಚಯವಾಯಿತು. ಅತ್ಯಂತ ಕಿರಿಯ ವಯಸ್ಸಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ ಅವರ ಕಾದಂಬರಿಗಳನ್ನು ಓದಲು ಆರಂಭಿಸಿದ್ದರು.ಸಾಹಿತ್ಯ ಆಸಕ್ತಿ ಮೂಡಿಸಿದ ಘಟ್ಟ – 2
ಇದನ್ನೂ ಓದಿ » ನಾ.ಡಿಸೋಜ ಅಂತ್ಯಕ್ರಿಯೆ ಕುರಿತು ಪುತ್ರನ ಹೇಳಿಕೆ, ಇಲ್ಲಿದೆ ವಿಡಿಯೋ