ಶಿವಮೊಗ್ಗ ಟ್ರಾಫಿಕ್‌ ಪೊಲೀಸರಿಂದ ಹೆಲ್ಪ್‌ಲೈನ್‌ ಶುರು, ವಾಟ್ಸಪ್‌ನಲ್ಲೇ ದಾಖಲಿಸಬಹುದು ದೂರು

SHIVAMOGGA LIVE NEWS, 31 JANUARY 2024➤ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ : ನಗರದಲ್ಲಿ ಟ್ರಾಫಿಕ್‌ ಸಮಸ್ಯೆಗಳ ಕುರಿತು ಸಾರ್ವಜನಿಕರು ತಕ್ಷಣ ದೂರು ನೀಡಲು ಸಂಚಾರ ಪೊಲೀಸರು ಹೆಲ್ಪ್‌ಲೈನ್‌ (Helpline) ಆರಂಭಿಸಿದ್ದಾರೆ. ಈ ನಂಬರ್‌ಗೆ ಕರೆ ಮಾಡಬಹುದು ಅಥವಾ ವಾಟ್ಸಪ್‌ ಮೂಲಕ ದೂರು ಸಲ್ಲಿಸಬಹುದಾಗಿದೆ. ಕೂಡಲೆ ಸಂಚಾರ ಪೊಲೀಸರು ಪರಿಹಾರ ಒದಗಿಸಲಿದ್ದಾರೆ.

ಕೋಟೆ ಪೊಲೀಸ್‌ ಠಾಣೆ ಸಮೀಪ ಪೊಲೀಸ್‌ ಗೆಸ್ಟ್‌ ಹೌಸ್‌ ಆವರಣದಲ್ಲಿ ಆಯೋಜಿಸಿರುವ ಸಂಚಾರ ನಿಯಮಗಳ ಜಾಗೃತಿ ಪ್ರದರ್ಶನ ಉದ್ಘಾಟನೆ ಸಮಾರಂಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಹೆಲ್ಪ್‌ಲೈನ್‌ ನಂಬರ್‌ ಬಿಡುಗಡೆ ಮಾಡಿದರು.

Traffic-police-release-helpline-number-released

ಹೆಲ್ಪ್‌ಲೈನ್‌ ನಂಬರ್‌ ಹೇಗೆ ಕೆಲಸ ಮಾಡುತ್ತೆ?

ಶಿವಮೊಗ್ಗ ನಗರದಲ್ಲಿ ಯಾವುದೇ ಟ್ರಾಫಿಕ್‌ ಸಮಸ್ಯೆ ಉಂಟಾದರೆ 8277983404 ಮೊಬೈಲ್‌ ನಂಬರ್‌ಗೆ ಕರೆ ಅಥವಾ ವಾಟ್ಸಪ್‌ ಮೂಲಕ ಮೆಸೇಜ್‌ ಕಳುಹಿಸಬಹುದು. ಪೂರ್ವ ಮತ್ತು ಪಶ್ಚಿಮ ಸಂಚಾರ ಠಾಣೆಗಳಲ್ಲಿ ಎರಡು ಪ್ರತ್ಯೇಕ ಭದ್ರಾ ವಾಹನಗಳು ಸ್ಥಳಕ್ಕೆ ಆಗಮಿಸಲಿವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದರು.

ಏನೆಲ್ಲ ದೂರು ನೀಡಬಹುದು?

Shimoga Traffic police helpline

8277983404 ಮೊಬೈಲ್ ನಂಬರ್‌ ಶಿವಮೊಗ್ಗ ನಗರಕ್ಕೆ ಮಾತ್ರ ಸೀಮಿತ. ಸಿಟಿಯಲ್ಲಿನ ಸಂಚಾರ ನಿಯಮ ಉಲ್ಲಂಘನೆ ಕುರಿತು ಈ ನಂಬರ್‌ಗೆ ಕರೆ ಅಥವಾ ವಾಟ್ಸಪ್‌ ಮಾಡಬಹುದು.

Shimoga Traffic police helpline

ರಸ್ತೆ ಅಪಘಾತಗಳ ಸಂದರ್ಭ ಸಹಾಯಕ್ಕೆ, ಟ್ರಾಫಿಕ್‌ ಜಾಮ್‌ ಉಂಟಾಗಿದ್ದರೆ, ಸಂಚಾರ ನಿಯಮ ಉಲ್ಲಂಘನೆಗಳು, ಆಟೋದಲ್ಲಿ ಮೀಟರ್‌ ಅಳವಡಿಸದಿರುವುದು ಸೇರಿದಂತೆ ಎಲ್ಲ ಬಗೆಯ ಸಂಚಾರ ನಿಯಮಗಳ ಉಲ್ಲಂಘನೆ ಕುರಿತು ಕರೆ ಮಾಡಿ ಮಾಹಿತಿ ನೀಡಬಹುದು. ಫೋಟೊಗಳನ್ನು ತೆಗೆದು ವಾಟ್ಸಪ್‌ ಮೂಲಕ ಕಳುಹಿಸಬಹುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

Shimoga Traffic police helpline

ಇದನ್ನೂ ಓದಿ » ಶಿವಮೊಗ್ಗ ಟ್ರಾಫಿಕ್‌ ಪೊಲೀಸರಿಂದ ವಿಭಿನ್ನ ಜಾಗೃತಿ ಪ್ರದರ್ಶನ, ರಾಜ್ಯದಲ್ಲಿ ಇದೇ ಮೊದಲು ಇಂತಹ ಪ್ರಯತ್ನ, ಏನೇನಿದೆ?

Leave a Comment