ಕಾರ್ಗಲ್‌, ಶಿರಾಳಕೊಪ್ಪದಲ್ಲಿ ATMನಿಂದ ಹಣ ಬಿಡಿಸಿ ಮನೆಗೆ ಮರಳಿದ ಇಬ್ಬರಿಗೆ ಆಮೇಲೆ ಕಾದಿತ್ತು ಶಾಕ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 8 FEBRUARY 2025

ಸಾಗರ / ಶಿರಾಳಕೊಪ್ಪ : ATM ಕೇಂದ್ರದಲ್ಲಿ ಸಹಾಯ ಹಸ್ತ ಚಾಚಿ, ವಂಚಿಸುತ್ತಿದ್ದ ಖದೀಮರು ತಮ್ಮ ಕಾರ್ಯಾಚರಣೆಯನ್ನು ಶಿವಮೊಗ್ಗ ಸಿಟಿಗಷ್ಟೆ ಸೀಮಿತಗೊಳಿಸಿಲ್ಲ. ಈಗ ಕಾರ್ಗಲ್‌ ಮತ್ತು ಶಿರಾಳಕೊಪ್ಪ ಠಾಣೆಗಳಲ್ಲು ಪ್ರಕರಣ ದಾಖಲಾಗಿದೆ.

ಎಟಿಎಂನಿಂದ ಹಣ ಬಿಡಿಸಲು ಬರುವವರಿಗೆ ಅಪರಿಚಿತರು ಸಹಾಯ ಮಾಡುವವರಂತೆ ನಟಿಸುತ್ತಾರೆ. ಅವರ ಎಟಿಎಂ ಕಾರ್ಡ್‌ ಪಡೆದು, ಪಾಸ್‌ ವರ್ಡ್‌ ತಿಳಿದು, ಬಳಿಕ ಎಟಿಎಂ ಕಾರ್ಡ್‌ ಅದಲು ಬದಲು ಮಾಡಿಕೊಡುತ್ತಾರೆ. ಶಿವಮೊಗ್ಗ ನಗರದಲ್ಲಿ ಇಂತಹ ಪ್ರಕರಣಗಳು ವರದಿಯಾಗಿದ್ದವು.

ಕಾರ್ಗಲ್‌ ಠಾಣೆ ವ್ಯಾಪ್ತಿಯಲ್ಲಿ ಆಗಿದ್ದೇನು?

KARGAL-SAGARA-NEWS-1.jpg

ನಿವೃತ್ತ ಉದ್ಯೋಗಿ ಬಾಲಯ್ಯ ಅವರು ಕಾರ್ಗಲ್‌ನ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಹಣ ಬಿಡಿಸಲು ತೆರಳಿದ್ದರು. ಹಣ ಬಿಡಿಸಲು ನೆರವು ನೀಡುವುದಾಗಿ ಇಬ್ಬರು ಅಪರಿಚಿತರು ಧಾವಿಸಿದ್ದರು. ಬಾಲಯ್ಯ 10 ಸಾವಿರ ರೂ. ಹಣ ಬಿಡಿಸಿಕೊಂಡು, ಅಪರಿಚಿತರಿಂದ ಎಟಿಎಂ ಕಾರ್ಡ್‌ ಹಿಂಪಡೆದಿದ್ದರು.

ಆ ಬಳಿಕ ಬಾಲಯ್ಯ ಅವರ ಖಾತೆಯಿಂದ ಎರಡು ಬಾರಿ ಒಟ್ಟು 1.49 ಲಕ್ಷ ರೂ. ಹಣ ಡ್ರಾ ಆಗಿತ್ತು. ಪರಿಶೀಲಿಸಿದಾಗ ಎಟಿಎಂ ಕಾರ್ಡ್‌ ಬದಲಾಗಿರುವುದು ಬಾಲಯ್ಯ ಗಮನಕ್ಕೆ ಬಂದಿತ್ತು. ಘಟನೆ ಸಂಬಂಧ ಕಾರ್ಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಾಳಕೊಪ್ಪ ಠಾಣೆ ವ್ಯಾಪ್ತಿಯಲ್ಲಿ ಆಗಿದ್ದೇನು?

SHIRALAKOPPA-SHIKARIPURA-NEWS

ಗಾರೆ ಕೆಲಸ ಮಾಡುವ ದಸ್ತಗೀರ್‌ ಎಂಬುವವರು ಶಿರಾಳಕೊಪ್ಪದ ಕೆನರಾ ಬ್ಯಾಂಕ್‌ ಎಟಿಎಂನಲ್ಲಿ 5 ಸಾವಿರ ರೂ. ಹಣ ಬಿಡಿಸಲು ತೆರಳಿದ್ದರು. ಆಗ ಅವರಿಗೆ ಇಬ್ಬರು ಅಪರಿಚಿತರು ಸಹಾಯ ಮಾಡಿದ್ದರು. ಅದೇ ದಿನ ಸಂಜೆ ದಸ್ತಗೀರ್‌ ಅವರ ಖಾತೆಯಿಂದ 95 ಸಾವಿರ ರೂ. ಹಣ ವಿತ್‌ ಡ್ರಾ ಆಗಿರುವುದು ಗೊತ್ತಾಗಿದೆ.

ಪರಿಶೀಲಿಸಿದಾಗ ದಸ್ತಗೀರ್‌ ಅವರ ಎಟಿಎಂ ಕಾರ್ಡ್‌ ಬದಲಾಗಿತ್ತು. ಘಟನೆ ಸಂಬಂಧ ಶಿರಾಳಕೊಪ್ಪ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಯುವ ಕಾಂಗ್ರೆಸ್‌ ಚುನಾವಣೆ ಫಲಿತಾಂಶ ಪ್ರಕಟ, ಯಾವ್ಯಾವ ತಾಲೂಕಿಗೆ ಯಾರೆಲ್ಲ ಆಯ್ಕೆಯಾಗಿದ್ದಾರೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment