ವಾಯುಪಡೆ ಅಧಿಕಾರಿ ಮಂಜುನಾಥ್‌ ಸಾವು, ಹೊಸನಗರದಲ್ಲಿ ನಾಳೆ ಮೆರವಣಿಗೆ, ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

SHIVAMOGGA LIVE NEWS, 8 FEBRUARY 2025

ಶಿವಮೊಗ್ಗ : ವಾಯುಪಡೆ ಅಧಿಕಾರಿ (Airforce) ಜಿ.ಎಸ್‌.ಮಂಜುನಾಥ್‌ ಅವರ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ಹೊಸನಗರ ತಾಲೂಕು ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕೂರು ಗ್ರಾಮದಲ್ಲಿ ಅವರ ಮನೆ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ ಹೊಸನಗರದಿಂದ ಪಾರ್ಥೀವ ಶರೀರದ ಮೆರವಣಿಗೆ ನಡೆಯಲಿದೆ.

ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಸ್ಥಳೀಯ ಮುಖಂಡ ಮಂಜುನಾಥ ಸಣ್ಣಕ್ಕಿ, ವಾಯುಪಡೆ ಅಧಿಕಾರಿ ಜಿ.ಎಸ್.ಮಂಜುನಾಥ್‌ ಅವರ ಅಂತ್ಯಕ್ರಿಯೆ ಕುರಿತು ಮಾಹಿತಿ ನೀಡಿದರು.

IAF-OFFICER-MANJUNATH-house-at-hosanagara

ಹೊಸನಗರದಿಂದ ಮೆರವಣಿಗೆ

ಘಟನೆ ಕುರಿತು ತಾಲೂಕು ಆಡಳಿತದಿಂದ ಮಾಹಿತಿ ಬಂದಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಅಂತ್ಯಕ್ರಿಯೆಗೆ ಪೂರ್ಣ ಸಿದ್ಧತೆ ನಡೆಸುವಂತೆ ಸೂಚಿಸಿದ್ದಾರೆ. ಅದರಂತೆ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ. ತಹಶೀಲ್ದಾರ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದೇವೆ.

Kalleshwara-Enterprises.webp

ಮಂಜುನಾಥ ಸಣ್ಣಕ್ಕಿ, ಸ್ಥಳೀಯ ಮುಖಂಡ

IAF-OFFICER-MANJUNATH-house-at-hosanagara

ಫೆ.9ರಂದು ಬೆಳಗ್ಗೆ 8 ಗಂಟೆ : ಇಲ್ಲಿನ ಕೊಡಚಾದ್ರಿ ಕಾಲೇಜು ಮುಂಭಾಗದಿಂದ ಹೊಸನಗರದ ರಾಜಬೀದಿಯಲ್ಲಿ ವಾಯುಪಡೆಯ ವಾರಂಟ್‌ ಆಫೀಸರ್‌ ಜಿ.ಎಸ್.ಮಂಜುನಾಥ್‌ ಅವರ ಪಾರ್ಥೀವ ಶರೀರದ ಮೆರವಣಿಗೆ ನಡೆಸಲಾಗುತ್ತದೆ.

m5

ವಾಯುಪಡೆ ವಾರಂಟ್‌ ವಾರಂಟ್‌ ಆಫೀಸರ್‌ ಜಿ.ಎಸ್.ಮಂಜುನಾಥ್‌ ಅವರ ಮನೆ ಮುಂಭಾಗದಲ್ಲಿ ದುಃಖತಪ್ತ ಕುಟುಂಬದವರು

ಬೆಳಗ್ಗೆ 11 ಗಂಟೆಗೆ : ಬೆಳಗಾವಿಯಿಂದ ವಾಯುಪಡೆ ಅಧಿಕಾರಿಗಳ ತಂಡ ಆಗಮಿಸಲಿದೆ. ಅವರು ವಾರಂಟ್‌ ಆಫೀಸರ್‌ ಜಿ.ಎಸ್.‌ಮಂಜುನಾಥ್‌ ಅವರ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಲಿದ್ದಾರೆ.

ಮಧ್ಯಾಹ್ನ 1 ಗಂಟೆ : ತಾಲೂಕು ಆಡಳಿತದ ವತಿಯಿಂದ ವಾರಂಟ್‌ ಆಫೀಸರ್‌ ಜಿ.ಎಸ್‌.ಮಂಜುನಾಥ್‌ ಅವರ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಲಾಗುತ್ತದೆ.

m4

ವಾಯುಪಡೆ ಅಧಿಕಾರಿ ಜಿ.ಎಸ್.ಮಂಜುನಾಥ್‌ ಅವರ ಅಂತ್ಯಕ್ರಿಯೆಗೆ ಸ್ಥಳ ಪರಿಶೀಲಿಸಿದ ಕುಟುಂಬದವರು.

ಮಧ್ಯಾಹ್ನ 2 ಗಂಟೆ : ವಾಯುಪಡೆ ಅಧಿಕಾರಿ ಜಿ.ಎಸ್.ಮಂಜುನಾಥ್‌ ಅವರ ಕುಟುಂಬದವರಿಗೆ ಪಾರ್ಥೀವ ಶರೀರ ಹಸ್ತಾಂತರ ಮಾಡಲಾತ್ತದೆ. ಕುಟುಂಬದರಿಂದ ಅಂತಿಮ ವಿಧಿವಿಧಾನ ನೆರವೇರಿಸಲಾಗುತ್ತದೆ.


ಇದನ್ನೂ ಓದಿ » ಪ್ಯಾರಾಚೂಟ್‌ ತೆರೆಯದೆ ಹೊಸನಗರ ಮೂಲದ ವಾಯುಸೇನೆ ಅಧಿಕಾರಿ ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment