ಶಿವಮೊಗ್ಗದಿಂದ ಕಾರ್ಮಿಕ ಮಹಿಳೆಯರನ್ನು ವಿಮಾನದಲ್ಲಿ ಗೋವಾಗೆ ಕರೆದೊಯ್ದ ಅಡಿಕೆ ತೋಟದ ಮಾಲೀಕ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ : ವಿಮಾನಯಾನದ ಅನುಭವ ಪಡೆಯಲು ಈ ಹಿಂದೆ ರೈತರೊಬ್ಬರು ಶಿವಮೊಗ್ಗ ವಿಮಾನ (Airport) ನಿಲ್ದಾಣದಿಂದ ಬೆಂಗಳೂರಿಗೆ ಹೋಗಿ ಬಂದಿದ್ದ ವಿಡಿಯೋ ವೈರಲ್‌ ಆಗಿತ್ತು . ಈಗ ತೋಟದ ಮಾಲೀಕರೊಬ್ಬರು ತಮ್ಮ ತೋಟಕ್ಕೆ ಕೂಲಿ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರನ್ನು ವಿಮಾನದಲ್ಲಿ ಕರೆದೊಯ್ದು ಅವರ ಆಸೆ ಈಡೇರಿಸಿದ್ದಾರೆ. 
➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹತ್ತು ಮಹಿಳೆಯರು ತಮ್ಮ ತೋಟದ ಮಾಲೀಕನೊಂದಿಗೆ ಗೋವಾಗೆ ಹಾರಿದ್ದಾರೆ.

farm-workers-at-shimoga-airport

ಸ್ಟಾರ್‌ ಏರ್‌ಲೈನ್ಸ್‌ನಲ್ಲಿ ಗೋವಾಗೆ

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಶಿರಗಾನಹಳ್ಳಿಯ ರೈತ ವಿಶ್ವನಾಥ್‌ ತಮ್ಮ ತೋಟಕ್ಕೆ ಕೆಲಸ ಬರುತ್ತಿದ್ದ ಮಹಿಳೆಯರನ್ನು ವಿಮಾನದಲ್ಲಿ ಕರೆದೊಯ್ದಿದ್ದಾರೆ. ‘ಒಮ್ಮೆಯಾದರು ವಿಮಾನದಲ್ಲಿ ಹಾರಬೇಕುʼ ಎಂಬುದು ಕೆಲಸಕ್ಕೆ ಬರುತ್ತಿದ್ದ ಮಹಿಳೆಯರ ಬಯಕೆಯಾಗಿತ್ತು. ಹಾಗಾಗಿ ವಿಶ್ವನಾಥ್‌ ವಿಮಾನಯಾನದ ಟ್ರಿಪ್‌ ಪ್ಲಾನ್‌ ಮಾಡಿದ್ದರು.

Farm workers trip to goa in star air from shimoga airport

ನಾನು ಆಗಾಗ ವಿಮಾನದಲ್ಲಿ ಹೋಗಿ ಬರುತ್ತಿದ್ದೆ. ನಮ್ಮ ತೋಟದಲ್ಲಿ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರು ನಮ್ಮನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗಿ ಎಂದು ಕೇಳಿದ್ದರು. ತಿರುಪತಿಗೆ ಹೋಗಿ ಬರುವ ಯೋಜನೆ ಇತ್ತು. ಆದರೆ ಟಿಕೆಟ್‌ ಸಿಗದಿದ್ದರಿಂದ ಗೋವಾ ಟಿಕೆಟ್‌ ಬುಕ್‌ ಮಾಡಿದ್ದೇವೆ. ಫೆ.20ರಂದು ವಿಮಾನದಲ್ಲಿಯೇ ಶಿವಮೊಗ್ಗಕ್ಕೆ ಹಿಂತಿರುಗುತ್ತೇವೆ.

ವಿಶ್ವನಾಥ್‌, ತೋಟದ ಮಾಲೀಕ

farm-workers-at-shimoga-airport

Farm workers trip to goa in star air from shimoga airport

ವಿಮಾನ ನಿಲ್ದಾಣದಲ್ಲಿ ಗ್ರೂಪ್‌ ಫೋಟೊ

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರೈತ ವಿ‍ಶ್ವನಾಥ್‌ ತಮ್ಮೊಂದಿಗೆ ಬಂದಿದ್ದ ಹತ್ತು ಮಹಿಳೆಯರ ಗ್ರೂಪ್‌ ಫೋಟೊ ತೆಗೆಸಿಕೊಂಡು ಖುಷಿ ಪಟಿದ್ದಾರೆ. ಅಲ್ಲದೆ ವಿಮಾನದಲ್ಲಿ ಎಲ್ಲರು ಒಟ್ಟಿಗೆ ಪ್ರಯಾಣಿಸುವ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೋ, ಫೋಟೊಗಳು ಈಗ ವೈರಲ್‌ ಆಗಿವೆ. ಗೋವಾಗೆ ತೆರಳಿರುವ ಮಹಿಳೆಯರು ಪ್ರಮುಖ ಪ್ರವಾಸಿ ತಾಣಗಳು, ಬೀಚ್‌ಗೆ ಹೋಗಿ ಬರುವ ಯೋಜನೆ ಮಾಡಿಕೊಂಡಿದ್ದಾರೆ.

NATIONAL-PUBLIC-SCHOOL-scaled

ವಿಶ್ವನಾಥ್‌ ಅವರು 15 ಎಕೆರೆ ಅಡಿಕೆ ತೋಟ ಹೊಂದಿದ್ದಾರೆ. ಈ ಮಹಿಳೆಯರು ತೋಟಕ್ಕೆ ನಿತ್ಯ ಕೆಲಸಕ್ಕೆ ಬರುತ್ತಿದ್ದರು.

Farm workers trip to goa in star air from shimoga airport

Parishrama advt 10 feb 2025 1

Farm workers trip to goa in star air from shimoga airport

Farm workers trip to goa in star air from shimoga airport

ಇದನ್ನೂ ಓದಿ » ಶಿವಮೊಗ್ಗದಲ್ಲಿ ಉದ್ಯೋಗ ಮೇಳ, ದಿನಾಂಕ ಪ್ರಕಟ, ಹೆಸರು ನೋಂದಣಿ ಶುರು

Leave a Comment