ಭದ್ರಾವತಿ ಅಧಿಕಾರಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಕಾರಣವೇನು?

ಶಿವಮೊಗ್ಗ : ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಅಧಿಕಾರಿಗೆ (Officer) ಶಿವಮೊಗ್ಗ ನ್ಯಾಯಾಲಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಭದ್ರಾವತಿ ತಾಲೂಕು ಎ.ಡಿ.ಎಲ್‌.ಆರ್‌ ಕಚೇರಿಯ ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯ ಶಿಕ್ಷೆಗೊಳಗಾದವರು.

ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದ ಅಧಿಕಾರಿ

ಭದ್ರಾವತಿ ತಾಲೂಕು ಮತ್ತಿಘಟ್ಟ ಗ್ರಾಮದ ಬಸವರಾಜಪ್ಪ ಎಂಬುವವರ 1.20 ಎಕರೆ ಜಮೀನಿನ ಪಕ್ಕ ಪೋಡಿಗೆ ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. 2013ರ ಜುಲೈ 23ರಂದು ಮಲ್ಲಿಕಾರ್ಜುನಯ್ಯ ಶಿವಮೊಗ್ಗದ ವಿನೋಬನಗರ ಕೆಂಚಪ್ಪ ಬಡಾವಣೆಯ ಮನೆಯಲ್ಲಿ 15 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಈ ಸಂಬಂಧ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಕೆ.ಸಿ.ಪುರುಷೋತ್ತಮ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಅಧಿಕಾರಿಗೆ ಜೈಲು ಶಿಕ್ಷೆ, ದಂಡ

NATIONAL-PUBLIC-SCHOOL-scaled

ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾ.ಮರುಳಸಿದ್ದಾರಾಧ್ಯ ಹೆಚ್.ಜೆ. ಅವರು ಅಧಿಕಾರಿ ಮಲ್ಲಿಕಾರ್ಜುನಯ್ಯಗೆ ಶಿಕ್ಷೆ ವಿಧಿಸಿದ್ದಾರೆ. ಒಂದು ವರ್ಷ ಆರು ತಿಂಗಳು ಜೈಲು ಶಿಕ್ಷೆ, 30 ಸಾವಿರ ರೂ. ದಂಡ ವಿಧಿಸಲಾಗಿದೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎಂ.ಡಿ.ಸುಂದರರಾಜ್‌ ವಾದ ಮಂಡಿಸಿದ್ದರು.

ಇದನ್ನೂ ಓದಿ » ಸಾಗರದಲ್ಲಿ ಇವತ್ತು ಸಾಹಿತ್ಯ ಹಬ್ಬ, ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ರಕ್ತದಾನ, ಸಾಲು ಸಾಲು ಗೋಷ್ಠಿಗಳು

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 1, 2025 at 8:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 1, 2025

Leave a Comment