ಕೋಣಂದೂರು ಸಮೀಪ ಕಾರುಗಳ ಸರಣಿ ಅಪಘಾತ, ಹರಿಹರಪುರ ಮಠದ ಶ್ರೀಗಳು ಪಾರು

ತೀರ್ಥಹಳ್ಳಿ : ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು ಚಿಕ್ಕಮಗಳೂರು ಜಿಲ್ಲೆ ಹರಿಹರಪುರ ಮಠದ ಸ್ವಾಮೀಜಿ (Swamiji) ಪಾರಾಗಿದ್ದಾರೆ. ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಕೋಟೆಗದ್ದೆ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಂಜಪ್ಪ ಲೈಫ್‌ ಕೇರ್‌ನಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ನೇರವಾಗಿ ಕರೆ ಮಾಡಿ ಹೆಸರು ನೋಂದಾಯಿಸಿ

ದನವೊಂದು ದಿಢೀರ್‌ ರಸ್ತೆಗೆ ಬಂದಿದ್ದರಿಂದ ಎಸ್ಕಾರ್ಟ್‌ ವಾಹನ ಬ್ರೇಕ್‌ ಹಾಕಿದೆ. ಹಿಂಬದಿಯಲ್ಲಿದ್ದ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಎಸ್ಕಾರ್ಟ್‌ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿಯಲ್ಲಿ ಬರುತ್ತಿದ್ದ ಮಠದ ಮತ್ತೊಂದು ಕಾರು ಸ್ವಾಮೀಜಿ ಇದ್ದ ಕಾರಿಗೆ ಅಪ್ಪಳಿಸಿದೆ. ಮೂರು ವಾಹನಗಳು ಜಖಂ ಆಗಿವೆ.

070325-Swamiji-Car-accident-near-konanduru-in-thirthahalli.webp

ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಚಿಕ್ಕಮಗಳೂರಿನಿಂದ ಶಿರಸಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್‌ ಶ್ರೀಗಳು ಮತ್ತು ಕಾರಿನಲ್ಲಿದ್ದ ಉಳಿದವರು ಪಾರಾಗಿದ್ದಾರೆ. ಶ್ರೀಗಳು ಬದಲಿ ಕಾರಿನಲ್ಲಿ ಪ್ರಯಾಣ ಮುಂದುವರೆಸಿದರು ಎಂದು ತಿಳಿದು ಬಂದಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಚಂದ್ರಗುತ್ತಿ ಅಭಿವೃದ್ಧಿಗೆ ಯೋಜನೆ ಸಿದ್ಧ, ಬಜೆಟ್‌ನಲ್ಲಿ ಮಹತ್ವದ ನಿರ್ಧಾರ ಪ್ರಕಟ, ಏನದು?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment