ಶಿವಮೊಗ್ಗ : ಹೋಳಿ (Holi) ಹಬ್ಬದ ಅಂಗವಾಗಿ ಜಿಲ್ಲೆಯ ವಿವಿಧೆಡೆ ಮನ್ಮಥ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ಹಲವು ಕಡೆ ಗುರುವಾರ ಮನ್ಮಥನ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸಲಾಗಿದೆ. ಹಬ್ಬದ ನಂತರ ಕಾಮದಹನ ಮಾಡಲಾಗುತ್ತದೆ.
ಶಿವಮೊಗ್ಗದಲ್ಲಿ ಮಾ.15ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಂಭ್ರಮದ ಹೋಳಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಗೋಪಿ ವೃತ್ತದಲ್ಲಿ ರೈನ್ ಡಾನ್ಸ್ ಆಯೋಜಿಸಲಾಗಿದೆ.
ಕಾಮಣ್ಣನ ಪ್ರತಿಮೆ ಪ್ರತಿಷ್ಠಾಪನೆ
ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನ, ತುಳಜಾ ಭವಾನಿ ದೇಗುಲ, ಕುಂಬಾರ ಬೀದಿ, ಬಿ.ಬಿ.ರಸ್ತೆಯಲ್ಲಿ ಕಾಮಣ್ಣನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಶನಿವಾರ ಈ ಮೂರ್ತಿಗಳ ದಹನ ಮಾಡಲಾಗುತ್ತದೆ. ಇದಕ್ಕೂ ಮುನ್ನ ಮೆರವಣಿಗೆ ನಡೆಯಲಿದೆ.
ಭದ್ರಾವತಿಯಲ್ಲೂ ಮನ್ಮಥ ಪ್ರತಿಷ್ಠಾಪನೆ
ಭದ್ರಾವತಿ ನಗರದ ವಿವಿಧೆಡೆಯು ಮನ್ಮಥನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಭೂತನಗುಡಿಯ ಶ್ರೀಕೃಷ್ಣ ರುಕ್ಮಿಣಿ ದೇಗುಲದ ಬಳಿ ಕೋಟ್, ಕನ್ನಡಕ ಧರಿಸಿರುವ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿದೆ. ಬ್ರಾಹ್ಮಣರ ಬೀದಿ, ಶ್ರೀ ಲಕ್ಷ್ಮಿ ನರಸಿಂಹ ದೇಗುಲದ ಸಮೀಪ, ಕುಂಬಾರ ಬೀದಿಯಲ್ಲು ಮನ್ಮಥನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಶನಿವಾರ ಈ ಮೂರ್ತಿಗಳ ಮೆರವಣಿಗೆ ನಡೆಸಿ, ದಹಿಸಲಾಗುತ್ತದೆ.

ಸಾಗರದಲ್ಲೂ ಮನ್ಮಥನ ಪ್ರತಿಷ್ಠಾಪನೆ
ಸಾಗರದ ಅಶೋಕ ವೃತ್ತದಲ್ಲಿ ಅಶೋಕ ಯುವ ಸಂಘದಿಂದ ಮನ್ಮಥನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇನ್ನು, ತಾಲೂಕಿನ ವಿವಿಧೆಡೆ ಪ್ರಮುಖ ವೃತ್ತಗಳಲ್ಲಿ ರತಿ ಮನ್ಮಥರ ಪ್ರತಿಕೃತಿ ಪ್ರತಿಷ್ಠಾಪಿಸಲಾಗಿದೆ. ಮಾರ್ಚ್ 14ರ ಮಧ್ಯಾಹ್ನ 1 ಗಂಟೆಯವರೆಗೂ ಬಣ್ಣ ಎರೆಚುವ ಓಕಳಿಯಾಟಕ್ಕೆ (Holi) ಅವಕಾಶ ನೀಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಹೋಳಿ ಆಚರಿಸಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ » ಹಿನ್ನೀರಿಗೆ ಹಾರಿ ರೈತ ಆತ್ಮಹತ್ಯೆ, ಕಾರಣವೇನು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200