ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ : ಆರೋಪಿಯೊಬ್ಬನ ಭೇಟಿಗೆ ಜೈಲಿಗೆ (Jail) ಬಂದಿದ್ದ ಇಬ್ಬರು ಯುವಕರು ಆರು ಪೊಟ್ಟಣಗಳನ್ನು ಜೈಲು ಆವರಣದಲ್ಲಿ ಹುದುಗಿಸಿಟ್ಟಿದ್ದಾರೆ. ಅವರನ್ನು ತಡೆಯಲು ಭದ್ರತಾ ಸಿಬ್ಬಂದಿ ಯತ್ನಿಸಿದಾಗ ಬೈಕ್ ಅನ್ನು ಗೇಟಿಗೆ ಗುದ್ದಿಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಯ ಭೇಟಿಗೆ ಬಂದಿದ್ದರು
ಚಂದನ್ ಮತ್ತು ದರ್ಶನ್ ಎಂಬುವವರು ವಿಚಾರಣಾಧೀನ ಖೈದಿ ಚೇತನ್ ಎಂಬಾತನ ಭೇಟಿಗೆ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ (Jail) ಬಂದಿದ್ದರು. ಖೈದಿಯ ಭೇಟಿಯ ವೇಳೆ ಇವರು ಅನುಮಾನಾಸ್ಪದವಾಗಿ ವರ್ತಿಸಿದ್ದನ್ನು ಗಮನಿಸಿದ ಕೆಎಸ್ಐಎಸ್ಎಫ್ ಭದ್ರತಾ ಸಿಬ್ಬಂದಿ ಇಬ್ಬರ ಮೇಲೆ ನಿಗಾ ಇರಿಸಿದ್ದರು.

ಆರು ಪೊಟ್ಟಣ ಹುದುಗಿಸಲು ಯತ್ನ
ಖೈದಿಯನ್ನು ಭೇಟಿಯಾಗಿ ಹಿಂತಿರುಗುವಾಗ ಇನ್ಸುಲೇಷನ್ ಟೇಪ್ನಿಂದ ಸುತ್ತಿರುವ ಆರು ಪೊಟ್ಟಣಗಳನ್ನು ಗಿಡದ ಬಳಿ, ಕಸದ ರಾಶಿ ಬಳಿ ಹುದುಗಿಸಿಡಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಕೆಎಸ್ಐಎಸ್ಎಫ್ ಸಿಬ್ಬಂದಿ ದರ್ಶನ್ ಮತ್ತು ಚಂದನ್ನನ್ನು ಹಿಡಿಯಲು ಯತ್ನಿಸಿದ್ದಾರೆ. ಆಗ ಇಬ್ಬರು ಬೈಕಿನಲ್ಲಿ ಎಸ್ಕೇಪ್ ಆಗಿದ್ದಾರೆ. ಈ ಸಂದರ್ಭ ಅವರು ಜೈಲಿನ ಗೇಟಿಗೆ ಗುದ್ದಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಆರು ಅನುಮಾನಾಸ್ಪದ ಪೊಟ್ಟಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಹೊಟೇಲ್ನಲ್ಲಿ ಮುದ್ದೆ, ಮಟನ್ ತಿಂದು, ಮಾಲೀಕನ ಕುತ್ತಿಗೆಗೆ ಚಾಕು ಇರಿದ ಗ್ರಾಹಕ, ಆಗಿದ್ದೇನು?
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು





