ಹೊಟೇಲ್‌ನಲ್ಲಿ ಮುದ್ದೆ, ಮಟನ್‌ ತಿಂದು, ಮಾಲೀಕನ ಕುತ್ತಿಗೆಗೆ ಚಾಕು ಇರಿದ ಗ್ರಾಹಕ, ಆಗಿದ್ದೇನು?

ಶಿವಮೊಗ್ಗ : ಊಟದ ಹಣ (Money) ಕೊಡುವಂತೆ ಕೇಳಿದ ಹೊಟೇಲ್‌ ಮಾಲೀಕನಿಗೆ ಗ್ರಾಹಕನೊಬ್ಬ ಚಾಕುವಿನಿಂದ ಇರುದಿದ್ದಾನೆ. ಹೊಟೇಲ್‌ ಮಾಲೀಕನನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. (ಈ ಸುದ್ದಿಯನ್ನು ಇನ್ನು 44 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಹೊಟೇಲ್‌ ಮಾಲೀಕ ಕೃಷ್ಣಪ್ಪ ಗಾಯಗೊಂಡಿದ್ದಾರೆ. ಶಿವಮೊಗ್ಗ – ಹೊನ್ನಾಳಿ ರಸ್ತೆಯ ದೀಪಕ್‌ ವೈನ್‌ ಸ್ಟೋರ್‌ ಪಕ್ಕದಲ್ಲಿರುವ ಖುಷಿ ಫಾಸ್ಟ್‌ ಫುಡ್‌ ಹೊಟೇಲ್‌ನಲ್ಲಿ ಘಟನೆ ಸಂಭವಿಸಿದೆ.

ಕುತ್ತಿಗೆಗೆ ಚಾಕು ಇರಿದ ಗ್ರಾಹಕ

NFC-Chicken-Kabab

ಕೃಷ್ಣಪ್ಪ ಅವರ ಫಾಸ್ಟ್‌ ಫುಡ್‌ ಹೊಟೇಲ್‌ಗೆ ಬಂದ ವ್ಯಕ್ತಿಯೊಬ್ಬ ಮುದ್ದೆ ಮತ್ತು ತಲೆ ಮಟನ್‌ ಸೇವಿಸಿದ್ದ. ಬಿಲ್‌ (Money) ಪಾವತಿಸುವಂತೆ ಕೃಷ್ಣಪ್ಪ ಕೇಳಿದಾಗ, ಕೆರಳಿದ ಆತ ಮಾತಿಗೆ ಮಾತು ಬೆಳೆಸಿ ತನ್ನ ಜೇಬಿನಲ್ಲಿದ್ದ ಚಾಕು ತೆಗೆದು ಕುತ್ತಿಗೆಗೆ ಇರಿದಿದ್ದಾನೆ. ಅಲ್ಲೇ ಇದ್ದವರು ಆ ವ್ಯಕ್ತಿಯ ಕೈಯಿಂದ ಚಾಕು ಕಸಿದುಕೊಂಡು, ಕೃಷ್ಣಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ದುರ್ಗಿಗುಡಿಯಲ್ಲಿ ವಿಜೃಂಭಣೆಯ ರಥೋತ್ಸವ, ರಣ ಬಿಸಿಲಲ್ಲೂ ಸೇರಿದ್ದರು ದೊಡ್ಡ ಸಂಖ್ಯೆಯ ಜನ

crime name image

Leave a Comment