ಶಿವಮೊಗ್ಗ ಪಾಲಿಕೆ ವಲಯ ಕಚೇರಿಗೆ ವಾರ್ಡ್‌ಗಳ ವಿಂಗಡಣೆ ಅವೈಜ್ಞಾನಿಕ, ಜೆಡಿಎಸ್‌ ಆಕ್ರೋಶ, ಮನವಿಯಲ್ಲಿ ಏನೇನಿದೆ?

ಶಿವಮೊಗ್ಗ : ಆಡಳಿತದ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆಯನ್ನು ಮೂರು ವಿಭಾಗವಾಗಿ (Division) ವಿಂಗಡಿಸಲಾಗಿದೆ. ಆದರೆ ಈ ವಿಂಗಡಣೆಯಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕುವೆಂಪು ರಂಗಮಂದಿರದಲ್ಲಿ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್‌ ನೇತೃತ್ವದಲ್ಲಿ ಜೆಡಿಎಸ್‌ ನಗರ ಅಧ್ಯಕ್ಷ ದೀಪಕ್‌ ಸಿಂಗ್‌ ಮನವಿ ಸಲ್ಲಿಸಿದರು.

ಏನೆಲ್ಲ ನ್ಯೂನತೆಗಳಿವೆ?

JDS-Submits-Memorandum-about-Palike-division-office

ಪಾಲಿಕೆಯ ವಲಯ 1ರ ಕಚೇರಿಯು ವಿನೋಬಗರದಲ್ಲಿದೆ. ಈ ವಲಯಕ್ಕೆ ಟಿಪ್ಪು ನಗರ, ಸವಾಯಿ ಪಾಳ್ಯ ಮತ್ತು ವಿದ್ಯಾನಗರವನ್ನು ಸೇರಿಸಲಾಗಿದೆ. ಈ ವಾರ್ಡುಗಳು ವಲಯ ಕಚೇರಿಯಿಂದ 5 ಕಿ.ಮೀ.ಗಿಂತಲು ಹೆಚ್ಚಿನ ದೂರದಲ್ಲಿವೆ.

Kalleshwara-Enterprises.webp

ಇನ್ನು, ವಲಯ 3ರ ಕಚೇರಿ ಇಮಾಮ್‌ ಬಾಡಾದಲ್ಲಿದೆ. ಈ ವಲಯಕ್ಕೆ ವಿನೋಬನಗರ ದಕ್ಷಿಣ ಮತ್ತು ಶರಾವತಿ ನಗರ ವಾರ್ಡ್‌ಗಳನ್ನು ಸೇರಿಸಲಾಗಿದೆ. ವಲಯ ಕಚೇರಿಗೂ ಈ ವಾರ್ಡ್‌ಗಳಿಗು 5 ಕಿ.ಮೀ.ಗಿಂತಲು ಹೆಚ್ಚಿನ ಅಂತರವಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ವಿನೋಬನಗರದಲ್ಲೇ ಇರುವ ವಲಯ 1ರ ಕಚೇರಿ ವ್ಯಾಪ್ತಿಯಲ್ಲೇ ಇರುವ ವಿನೋಬನಗರ ದಕ್ಷಿಣ ಮತ್ತು ಶರಾವತಿ ನಗರ ಪ್ರದೇಶಗಳನ್ನು ವಲಯ 3ರ (Division) ಕಚೇರಿ ವ್ಯಾಪ್ತಿಗೆ ಸೇರಿಸಲಾಗಿದೆ. ಇನ್ನು, ವಲಯ 3ರ ಕಚೇರಿ ವ್ಯಾಪ್ತಿಗೆ ಬರುವ ಟಿಪ್ಪುನಗರ, ಸವಾಯಿ ಪಾಳ್ಯ, ವಿದ್ಯಾನಗರ ದಕ್ಷಿಣ ವಾರ್ಡುಗಳನ್ನ ವಲಯ 1ರ ವ್ಯಾಪ್ತಿಗೆ ಸೇರಿಸಿರುವು ಅವೈಜ್ಞಾನಿಕವಾಗಿದೆ ಎಂದು ಜೆಡಿಎಸ್‌ ಕಾರ್ಯಕರ್ತರು ಆರೋಪಿಸಿದರು.

ಶಿವಮೊಗ್ಗ ನಗರದ ಭೌಗೋಳಿಕವಾಗಿ ಪರಿಗಣಿಸದೆ ಅಧಿಕಾರಿಗಳ ವಾರ್ಡುಗಳನ್ನು ವಲಯ ಕಚೇರಿಗಳ ವ್ಯಾಪ್ತಿಗೆ ಸೇರಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ವಲಯ ಕಚೇರಿ ವ್ಯಾಪ್ತಿಯ ವಾರ್ಡುಗಳನ್ನು ಪುನರ್‌ ಪರಿಶೀಲಿಸುವಂತೆ ಆಗ್ರಹಿಸಿದರು.

Web-Design

ಇದನ್ನೂ ಓದಿ » BIG IMPACT – ಶಿವಮೊಗ್ಗ ಲೈವ್‌ ವರದಿ ಬೆನ್ನಿಗೆ ಗಾಂಧಿ ಪಾರ್ಕ್‌ಗೆ ಉಪ ಲೋಕಾಯುಕ್ತರ ಭೇಟಿ, ಅಧಿಕಾರಿಗಳ ವಿರುದ್ಧ ಕೇಸ್‌

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment