ಶಿವಮೊಗ್ಗ ಲೈವ್
ಸಾಗರ : ತೆಂಗಿನ ಮರದ (Tree) ಮೇಲೆ ಗೂಡು ಕಟ್ಟಿದ್ದ ಗಿಣಿಯನ್ನು ಹಿಡಿಯುವ ಸಾಹಸದಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ತೆಂಗಿನ ಮರ ತಲೆ ಮೇಲೆ ಬಿದ್ದು ಸಚಿನ್ (24) ಕೊನೆಯುಸಿರೆಳೆದಿದ್ದಾನೆ.
ಸಾಗರ ತಾಲ್ಲೂಕಿನ ತಾಳಗುಪ್ಪದಲ್ಲಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಇನ್ನಿಬ್ಬರು ಯುವಕರು ಪಾರಾಗಿದ್ದಾರೆ.
ಒಣಗಿದ ತೆಂಗಿನ ಮರದ ತುದಿಯಲ್ಲಿ

ಭೂತಯ್ಯನ ಕಟ್ಟೆ ಸಮೀಪ ಒಣಗಿದ ತೆಂಗಿನ ಮರದ (Tree) ತುದಿಯಲ್ಲಿ ಗಿಣಿಯೊಂದು ಗೂಡು ಕಟ್ಟಿತ್ತು. ಮರ ಉರುಳಿಸಿ ಗೂಡು ಮತ್ತು ಗಿಣಿಯನ್ನು ಸೆರೆ ಹಿಡಿಯಲು ಯುವಕರು ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಮರ ಕತ್ತರಿಸುವಾಗ ಒಣಗಿದ ಮರ ಯುವಕರತ್ತ ಉರುಳಿದೆ. ಸಚಿನ್ ಎಂಬಾತನ ತಲೆ ಮೇಲೆ ಮರ ಬಿದ್ದಿದ್ದು, ಆತನ ಸಾವನ್ನಪ್ಪಿದೆ.
ಸಚಿನ್ ಜೊತೆಗೆ ತೆರಳಿದ್ದ ಇನ್ನಿಬ್ಬರು ಯುವಕರು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಲಕ್ಷ ಲಕ್ಷ ಮೌಲ್ಯದ ಮಾಂಗಲ್ಯ ಸರ ಖರೀದಿಸಿ ಮನೆಗೆ ಹೋಗಿ ನೋಡಿದಾಗ ಕಾದಿತ್ತು ಆಘಾತ, ಆಗಿದ್ದೇನು?
