ಶಿವಮೊಗ್ಗ ಜಿಲ್ಲೆಯ 5 ಕಡೆ ಡಿಸಿಸಿ ಬ್ಯಾಂಕ್‌ನ ನೂತನ ಶಾಖೆ ಆರಂಭಕ್ಕೆ ಅನುಮತಿ, ಎಲ್ಲೆಲ್ಲಿ ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಹೊಸನಗರ : ಜಿಲ್ಲೆಯ 5 ಕಡೆ ಡಿಸಿಸಿ ಬ್ಯಾಂಕ್ ನೂತನ ಶಾಖೆ (Branch) ತೆರೆಯಲು ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ಶೀಘ್ರದಲ್ಲಿ ನೂತನ ಶಾಖೆಗಳನ್ನು ಆರಂಭಿಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.
➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ನಗರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಆರ್‌.ಎಂ.ಮಂಜುನಾಥ ಗೌಡ, ಈ ಹಿಂದೆ ಜಿಲ್ಲೆಯ ಮೂರು ಕಡೆ ಚಾಲನೆ ನೀಡಲಾಗಿದೆ. ಇದೀಗ ಹೊಸನಗರ ತಾಲ್ಲೂಕಿನ ಚಿಕ್ಕಪೇಟೆ ನಗರ, ತೀರ್ಥಹಳ್ಳಿಯ ಎಪಿಎಂಸಿ, ಸಾಗರದ ತ್ಯಾಗರ್ತಿ, ಶಿವಮೊಗ್ಗದ ಗಾಜನೂರು, ಭದ್ರಾವತಿಯ ಬಾರಂದೂರಿನಲ್ಲಿ ಶಾಖೆ (Branch) ತೆರೆಯಲು ಅನುಮತಿ ಸಿಕ್ಕಿದೆ ಎಂದರು.

ಈ ವರ್ಷ 8 ಶಾಖೆಗಳನ್ನು ತೆರೆಯುತ್ತಿರುವುದು ಒಂದು ಇತಿಹಾಸ. ಜಿಲ್ಲೆಯಲ್ಲಿ ಒಟ್ಟು 14 ಶಾಖೆಗಳನ್ನು ತೆರೆಯಲು ಅನುಮತಿಗಾಗಿ ರಿಸರ್ವ್ ಬ್ಯಾಂಕ್‌ಗೆ ಮನವಿ ಸಲ್ಲಿಕೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕಿನ 50 ಶಾಖೆಗಳನ್ನು ತೆರೆಯುವ ಉದ್ದೇಶವಿದೆ.

– ಆರ್‌.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ

RM-Manjunatha-Gowda-in-Congress-Office

041224 Dr RM Manjunatha Gowda press meet in DCC Bank
File Photo

ರೈತರು ಮತ್ತು ಸ್ವಸಹಾಯ ಗುಂಪುಗಳಿಗೆ ಆರ್ಥಿಕ ಚೈತನ್ಯ ನೀಡುವ ಸಲುವಾಗಿ ಹಳ್ಳಿ ಹಳ್ಳಿಗಳಲ್ಲಿ ಶಾಖೆಗಳನ್ನು ಆರಂಭಿಸುವ ಅಗತ್ಯವಿದೆ. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ಅಡಿ ಡಿಸಿಸಿ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸಲಿದ್ದು, ಫೋನ್ ಪೇ ಸೌಲಭ್ಯ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್ ರೀತಿಯಲ್ಲೇ ಕಾರ್ಯ ನಿರ್ವಹಿಸಲಿದೆ ಎಂದು ಅವರು ವಿವರಿಸಿದರು.

ಶಿಮುಲ್ ಅಧ್ಯಕ್ಷ ವಿದ್ಯಾಧರ, ಸೊಸೈಟಿ ಅಧ್ಯಕ್ಷ ಅಂಬರೀಶ್, ಉಪಾಧ್ಯಕ್ಷ ಗೋಪಾಲ ಶೆಟ್ಟಿ, ಪ್ರಮುಖರಾದ ಮಾಸ್ತಿಕಟ್ಟೆ ಸುಬ್ರಮಣ್ಯ, ಕರುಣಾಕರ ಶೆಟ್ಟಿ, ಲೀಲಕೃಷ್ಣ ಮಕ್ಕೀಮನೆ, ದೇವಗಂಗೆ ಚಂದ್ರಶೇಖರ್ ಶೆಟ್ಟಿ, ವಿನಾಯಕ ಚಕ್ಕಾರು, ಸಿಇಒ ವಿಷ್ಣುವರ್ಧನ ಸೇರಿ ಹಲವರು ಇದ್ದರು.

ಇದನ್ನೂ ಓದಿ » ಶಿವಮೊಗ್ಗ ಈದ್ಗಾ ಮೈದಾನಕ್ಕೆ ಬೇಲಿ ವಿವಾದ, ಬೀದಿಗಿಳಿದ ಮುಸ್ಲಿಂ ಸಮುದಾಯ, ಇಡೀ ದಿನ ಏನೇನಾಯ್ತು?

Leave a Comment