ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಸಾಗರ : ರೈತರೊಬ್ಬರಿಂದ ರಸ್ತೆ ಬದಿಯಲ್ಲಿ ನಿಂತು ಹಣ ಸ್ವೀಕರಿಸುತ್ತಿದ್ದ ರಾಜಸ್ವ ನಿರೀಕ್ಷಕ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ (Red Handed) ಆಗಿ ಸಿಕ್ಕಿಬಿದ್ದಿದ್ದಾನೆ. ಲಂಚ ಪಡೆಯುತ್ತಿದ್ದ ತಾಳಗುಪ್ಪ ಹೋಬಳಿಯ ರಾಜಸ್ವ ನಿರೀಕ್ಷಕ (ಆರ್.ಐ) ಮಂಜುನಾಥ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದ ವಿವಿಧೆಡೆ ಇ.ಡಿ ದಾಳಿ, ಬೆಂಗಳೂರಿನಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ವಿಚಾರಣೆ
ತಾಳಗುಪ್ಪ ಹೋಬಳಿಯ ಮುಂಡಿಗೆಹಳ್ಳದ ಕೃಷ್ಣಮೂರ್ತಿ ಎಂಬುವವರ ಜಮೀನು ಸಮತಟ್ಟು ಮಾಡಲು ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅನುಮತಿ ಸಿಕ್ಕಿರಲಿಲ್ಲ. ಹಾಗಾಗಿ ಜಮೀನು ಸಮತಟ್ಟು ಮಾಡುವ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ರಾಜಸ್ವ ನಿರೀಕ್ಷಕ ಕೃಷ್ಣಮೂರ್ತಿ ಸ್ಥಳಕ್ಕೆ ಆಗಮಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ಮಾ.20ರಂದು ಫೋನ್ ಪೇ ಮೂಲಕ 2500 ರೂ., ಏಪ್ರಿಲ್ 2ರಂದು 500 ರೂ. ಲಂಚ ಪಡೆದಿದ್ದರು. ಪುನಃ 3 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಇವತ್ತು ಸುಳ್ಳೂರು ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೃಷ್ಣಮೂರ್ತಿ ಅವರಿಂದ ಮಂಜುನಾಥ್ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ (Red Handed) ನಡೆಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲೋಕಾಯುಕ್ತ ಉಪಾಧೀಕ್ಷಕ ಬಿ.ಪಿ.ಚಂದ್ರಶೇಖರ್ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್.ಕುಸಲಾಪುರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸಿಬ್ಬಂದಿ ಟೀಕಪ್ಪ, ಮಂಜುನಾಥ್, ಸುರೇಂದ್ರ, ಯೋಗೇಶ್, ಪ್ರಶಾಂತ್ ಕುಮಾರ್, ಬಿ.ಟಿ.ಚನ್ನೇಶ್, ದೇವರಾಜ್, ಅರುಣ್ ಕುಮಾರ್, ಪ್ರಕಾಶ್ ಬಾರಿಮರದ, ಆದರ್ಶ, ಚಂದ್ರಿಬಾಯಿ, ಪ್ರದೀಪ್, ಗೋಪಿ, ಜಯಂತ್, ತರುಣ್ ಕುಮಾರ್, ಗಂಗಾಧರ್, ಆನಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

LATEST NEWS
- ನಾಳೆಯಿಂದ ಶಿವಮೊಗ್ಗದ ಶೇ.90ರಷ್ಟು ಹೊಟೇಲ್ಗಳು ಬಂದ್, ಕಾರಣವೇನು?

- ಭದ್ರಾವತಿ ಹುತ್ತಾ ಕಾಲೋನಿಯಲ್ಲಿ ಬೈಕ್ ಸಹಿತ ಚಾನಲ್ಗೆ ಬಿದ್ದ ವ್ಯಕ್ತಿ, ಆಗಿದ್ದೇನು?

- ಗೋಪಿ ಸರ್ಕಲ್ನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದಂತೆ ನರೇಂದ್ರ ಮೋದಿ ಡಾನ್ಸ್, ಸೌದೆ ಒಲೆ ಅಡುಗೆ

- ಶಿವಮೊಗ್ಗ ಜಿಲ್ಲೆಯ ಕಡಿಮೆಯಾದ ತಾಪಮಾನ, ಇವತ್ತು ಎಲ್ಲೆಲ್ಲಿ ಹೇಗಿರಲಿದೆ ವಾತಾವರಣ?

- ಶಿವಮೊಗ್ಗದ ಸೂಳೆಬೈಲ್ ಮಹಿಳೆ ಅರೆಸ್ಟ್, ₹18,00,000 ಮೊತ್ತದ ಆಭರಣ ಸೀಜ್, ಏನಿದು ಕೇಸ್?

About The Editor
ನಿತಿನ್ ಆರ್.ಕೈದೊಟ್ಲು





