ಭದ್ರಾವತಿಯಲ್ಲಿ ಬೆಳ್ಳಂಬೆಳಗ್ಗೆ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸ್‌, ಏನಿದು ಕೇಸ್‌?

ಭದ್ರಾವತಿ : ಪಿಸ್ತೂಲ್‌ ಮತ್ತು ಡ್ರಾಗರ್‌ನಿಂದ ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗಂಡು ಹಾರಿಸಿದ್ದಾರೆ. ನ್ಯೂ ಟೌನ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಬಂದೂಕಿನಿಂದ ಹಾರಿದ ಗುಂಡು ಆರೋಪಿ ನಸ್ರು ಅಲಿಯಾಸ್‌ ನಸ್ರುಲ್ಲಾ ಎಂಬಾತನ ಎಡಗಾಲು ಸೀಳಿದೆ.

ಪ್ರಕರಣವೊಂದರಲ್ಲಿ ಪರಾರಿಯಾಗಿದ್ದ ನಸ್ರುಲ್ಲಾನನ್ನು ಬಂಧಿಸಲು ತೆರಳಿದ್ದಾಗ ಘಟನೆ ಸಂಭವಿಸಿದೆ. ಇವತ್ತು ಬೆಳಗ್ಗೆ ನಸ್ರು ಇರುವ ಜಾಗಕ್ಕೆ ಪೊಲೀಸರು ತೆರಳಿದಾಗ ಆತ ದಾಳಿ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಪಿಸ್ತೂಲು, ಡ್ರ್ಯಾಗರ್‌ನಿಂದ ದಾಳಿಗೆ ಯತ್ನ

ಓಲ್ಡ್‌ ಟೌನ್‌ ಠಾಣೆ ಪಿಎಸ್‌ಐ ಚಂದ್ರಶೇಖರ್‌ ಸೋಮವಾರ ದಾಳಿ ನಡೆಸಿ 1.4 ಕೆ.ಜಿ ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ನಸ್ರು ಅಲಿಯಾಸ್‌ ನಸ್ರುಲ್ಲಾ ಪರಾರಿಯಾಗಿದ್ದ. ಇವತ್ತು ಈತನ ಬಂಧನಕ್ಕೆ ತೆರಳಿದಾಗ ಕಂಟ್ರಿ ಪಿಸ್ತೂಲ್‌ ಮತ್ತು ಡ್ರ್ಯಾಗರ್‌ನಿಂದ ಪೊಲೀಸ್‌ ಸಿಬ್ಬಂದಿ ಮೇಲೆ ದಾಳಿಗೆ ಯತ್ನಿಸಿದ್ದಾನೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ವಾಟ್ಸಪ್‌ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Police-Shoot-nasrulla-on-leg-at-Bhadravathi

ನಸ್ರುಲ್ಲಾ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ. ಈತ ಭದ್ರಾವತಿಯ ಅನ್ವರ್‌ ಕಾಲೋನಿಯ ನಿವಾಸಿ. ಈತನ ವಿರುದ್ಧ ಐದು ಪ್ರಕರಣಗಳಿವೆ.

Kalleshwara-Enterprises.webp

ನ್ಯೂ ಟೌನ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ನಸ್ರು ಬಳಿ ಇದ್ದ ಕಂಟ್ರಿ ಪಿಸ್ತೂಲ್‌ ಮತ್ತು ಡ್ರ್ಯಾಗರ್‌ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲ ಅಬ್ಬರ ಮುಂದುವರಿಕೆ, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment