NEWS HIGHLIGHTS
ಭದ್ರಾವತಿ : ಜಮೀನಿನ ಬೋರ್‌ವೆಲ್‌ಗೆ ಅಳವಡಿಸಿದ್ದ ಮೋಟರ್ (Motor) ಕಳ್ಳತನ ಮಾಡಲಾಗಿದೆ. ಮಾಲೀಕರು ಜಮೀನಿಗೆ ಬಂದಾಗ ಎರಡು ಹೆಚ್.ಪಿ.ಯ ಮೋಟರ್ ಕಳುವಾಗಿರುವುದು ಬೆಳಕಿಗೆ ಬಂದಿದೆ.
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.ಇದನ್ನೂ ಓದಿ » ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಗ್ರಹಗಳ ಸ್ಥಿತಿ ಏನು? ಪರಿಹಾರಗಳೇನು?
ಭದ್ರಾವತಿ ತಾಲೂಕು ಸಿರಿಯೂರಿನಲ್ಲಿ ಗೌರಮ್ಮ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಬೋರ್‌ವೆಲ್ ಇದ್ದು, ನೀರೆತ್ತಲು ಮೋಟರ್ (Motor) ಅಳವಡಿಸಲಾಗಿತ್ತು. ಈಚೆಗೆ ಬೆಳಗ್ಗೆ ಜಮೀನಿಗೆ ಹೋದಾಗ ಬೋರ್‌ವೆಲ್‌ಗೆ ಅಳವಡಿಸಿದ್ದ ಪೈಪ್‌ಗಳು ಚೆಲ್ಲಾಪಿಲ್ಲಿಯಾಗಿದ್ದವು. ಪರಿಶೀಲಿಸಿದಾಗ 2 ಹೆಚ್.ಪಿ ಮೋಟರ್, ವಯರ್ ಮತ್ತು ಸ್ಟಾರ್ಟರ್ ಇರಲಿಲ್ಲ.
23 ಸಾವಿರ ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
