ಶಿವಮೊಗ್ಗ ಬದಲು ಬೆಳಗಾವಿಯಲ್ಲಿ ಇಳಿದ ವಿಮಾನ, ಪ್ರಯಾಣಿಕರ ಪರದಾಟ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ : ಹವಾಮಾನ ವೈಪರೀತ್ಯದಿಂದಾಗಿ ಭಾನುವಾರ ಸಂಜೆ ಶಿವಮೊಗ್ಗದಲ್ಲಿ (Airport) ಲ್ಯಾಂಡ್‌ ಆಗಬೇಕಿದ್ದ ವಿಮಾನವು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿ, ಊರಿಗೆ ಮರಳಲು ಪರದಾಡಬೇಕಾಯಿತು.
➤ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಶಿವಮೊಗ್ಗ ಸದ್ಯಕ್ಕೆ ಕೂಲ್‌ ಕೂಲ್‌, ಇವತ್ತು ಮಳೆಯಾಗುತ್ತಾ? ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?

ಶಿವಮೊಗ್ಗ ಮತ್ತು ಸುತ್ತಮುತ್ತಲು ಭಾನುವಾರ ದಟ್ಟ ಮೋಡ, ಗಾಳಿ ಸಹಿತ ಭಾರಿ ಮಳೆಯಾಗಿದೆ. ಹಾಗಾಗಿ ತಿರುಪತಿಯಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ವಿಮಾನವು ಇಲ್ಲಿ ಲ್ಯಾಂಡ್‌ ಆಗಲು ಸಾಧ್ಯವಾಗಿಲ್ಲ. ವಿಮಾನವನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿತ್ತು.

Shimoga-Passangers-Stuck-at-Belagavi-Sambra-Airport as the flight landed there
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿರುವ ಪ್ರಯಾಣಿಕರು.

ಬೆಳಗಾವಿಗೆ ವಿಮಾನ ಡೈವರ್ಟ್‌

ತಿರುಪತಿಯಿಂದ ಸಂಜೆ 4.55ರ ಹೊತ್ತಿಗೆ ಹೊರಟಿದ್ದ ವಿಮಾನ ಸಂಜೆ 6 ಗಂಟೆ ಹೊತ್ತಿಗೆ ಶಿವಮೊಗ್ಗ ವಿಮಾನ ನಿ‍ಲ್ದಾಣಕ್ಕೆ ತಲುಪಿತ್ತು. ದಟ್ಟ ಮೋಡ, ಮಳೆ ಇದ್ದಿದ್ದರಿಂದ ವಿಮಾನ ನಿಲ್ದಾಣದ (Airport) ಸುತ್ತಲು ಕತ್ತಲು ಆವರಿಸಿತ್ತು. ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆ ಇಲ್ಲದ್ದರಿಂದ ವಿಮಾನವನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಡೈವರ್ಟ್‌ ಮಾಡಲಾಗಿತ್ತು. ಸಂಜೆ 6.30ರ ಹೊತ್ತಿಗೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್‌ ಆಗಿತ್ತು.

ಇದನ್ನೂ ಓದಿ » ಸಾಗರದಲ್ಲಿ ಲಾರಿ, ಕಾರು ಪಲ್ಟಿ, ಅಪಘಾತಕ್ಕೆ ಕಾರಣ ಹಾವು, ಏನಿದು ಪ್ರಕರಣ?

ಬೆಳಗಾವಿಯಲ್ಲಿ ಪ್ರಯಾಣಿಕರ ಪರದಾಟ

Shimoga-Passangers-Stuck-at-Belagavi-Sambra-Airport as the flight landed there
ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಜೊತೆಗೆ ಪ್ರಯಾಣಿಕರ ಚರ್ಚೆ.

ಬೆಳಗಾವಿ ವಿಮಾನ ನಿ‍ಲ್ದಾಣದಲ್ಲಿ ಇಳಿದ ಬಳಿಕ 60 ಪ್ರಯಾಣಿಕರು ಸಂಕಷ್ಟಕ್ಕೀಡಾದರು. ಶಿವಮೊಗ್ಗಕ್ಕೆ ತೆರಳಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ವಿಮಾನಯಾನ ಸಂಸ್ಥೆಗೆ ಆಗ್ರಹಿಸಿದರು.

ನಮ್ಮೂರಿಗೆ ತೆರಳಲು ಸೂಕ್ತ ವ್ಯವಸ್ಥೆ ಮಾಡಿ ಎಂದು ಹಲವು ಬಾರಿ ಮನವಿ ಮಾಡಿದೆವು. ಪೊಲೀಸರಿಗು ಕರೆ ಮಾಡಿದೆವು. ರಾತ್ರಿ 10 ಗಂಟೆ ಹೊತ್ತಿಗೆ ಬಸ್‌ ವ್ಯವಸ್ಥೆ ಮಾಡಲಾಯಿತು. ಮೂರು ವಾಹನಗಳಲ್ಲಿ ಕಳುಹಿಸಿದ್ದಾರೆ. ಇಂದು ಬೆಳಗ್ಗೆ ಶಿವಮೊಗ್ಗ ತಲುಪಿದ್ದೇವೆ.

– ಕಿರಣ್‌, ವಕೀಲರು (ವಿಮಾನದಲ್ಲಿ ಪ್ರಯಾಣಿಸಿದವರು)

Shimoga-Passangers-Stuck-at-Belagavi-Sambra-Airport

ನೈಟ್‌ ಲ್ಯಾಂಡಿಂಗ್‌ ವ್ಯವಸ್ಥೆ ಇಲ್ಲದ್ದರಿಂದ ಶಿವಮೊಗ್ಗದಲ್ಲಿ ಸಂಜೆ ವೇಳೆಗೆ ವಿಮಾನ ಲ್ಯಾಂಡಿಂಗ್‌ಗೆ ತೀವ್ರ ಸಮಸ್ಯೆಯಾಗುತ್ತಿದೆ. ವಿಮಾನ ತಡವಾಗಿ ಬಂದರೆ ಪೈಲೆಟ್‌ಗಳಿಗೆ ರನ್‌ ವೇ ಗೋಚರಿಸುವುದಿಲ್ಲ. ಹಾಗಾಗಿ ಇಲ್ಲಿ ಲ್ಯಾಂಡಿಂಗ್‌ ಮಾಡುವ ಬದಲು ಹತ್ತಿರದ ಬೇರೆ ವಿಮಾನ ನಿಲ್ದಾಣಗಳಲ್ಲಿ ಇಳಿಸುವುದು ಅನಿವಾರ್ಯವಾಗುತ್ತಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment