ಮೈಸೂರು – ಶಿವಮೊಗ್ಗ, ಮೈಸೂರು – ತಾಳಗುಪ್ಪ ರೈಲು ಕುರಿತು ಇಲಾಖೆಯಿಂದ ಪ್ರಮುಖ ಅಪ್‌ಡೇಟ್‌, ಏನದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ರೈಲ್ವೆ ಸುದ್ದಿ: ಹಬ್ಬನಘಟ್ಟ ಮತ್ತು ಅರಸೀಕೆರೆ ನಡುವಿನ ಲೈನ್ ಬ್ಲಾಕ್‌ನಿಂದಾಗಿ ಈ ಹಿಂದೆ ಕೆಲವು ರೈಲುಗಳ (Train) ಸಂಚಾರ ರದ್ದು, ಭಾಗಶಃ ರದ್ದು ಮತ್ತು ನಿಯಂತ್ರಿಸಲಾಗಿತ್ತು. ಈ ಪೈಕಿ ಕೆಲವು ರೈಲು ಸೇವೆ ಪುನರಾರಂಭಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
➤ ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಮೂರು ರೈಲು ವೇಳಾಪಟ್ಟಿಯಂತೆ ಸಂಚಾರ

» ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್

ಈ ಹಿಂದೆ ಏಪ್ರಿಲ್ 29, ಮೇ 3 ಮತ್ತು 10 ರಂದು ರದ್ದುಗೊಳಿಸಲಾಗಿತ್ತು. ಈಗ ಈ ರೈಲು (Train) ಎಂದಿನಂತೆ ಅರಸೀಕೆರೆಯಿಂದ ಮೈಸೂರಿಗೆ ತನ್ನ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.

» ರೈಲು ಸಂಖ್ಯೆ 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್

ಈ ಹಿಂದೆ ಏಪ್ರಿಲ್ 29, ಮೇ 3 ಮತ್ತು 10 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಗೊಳಿಸಲಾಗಿತ್ತು. ಈಗ ಈ ರೈಲು ಮೈಸೂರಿನಿಂದ ಹೊರಟು ಶಿವಮೊಗ್ಗ ಟೌನ್‌ವರೆಗೆ ತನ್ನ ಪೂರ್ಣ ಮಾರ್ಗದಲ್ಲಿ ಸಂಚರಿಸಲಿದೆ.

Electric-Locomotive-train-for-Shimoga

» ರೈಲು ಸಂಖ್ಯೆ 16206 ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್

ಈ ಹಿಂದೆ ಏಪ್ರಿಲ್ 29, ಮೇ 3 ಮತ್ತು 10 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿತ್ತು. ಈಗ ಈ ರೈಲು ಮೈಸೂರಿನಿಂದ ಹೊರಟು ತಾಳಗುಪ್ಪದವರೆಗೆ ತನ್ನ ನಿಗದಿತ ವೇಳಾಪಟ್ಟಿಯಂತೆ ಚಲಿಸಲಿದೆ.

ಇದನ್ನೂ ಓದಿ » ಶಿವಮೊಗ್ಗದ ಸಿಟಿ ಸೆಂಟರ್‌ ಮಾಲ್‌ ಬಳಿ ಹೋಮ್‌ ಗಾರ್ಡ್‌ ಮೇಲೆ ಹಲ್ಲೆ, ಆಟೋ ಚಾಲಕ ಅರೆಸ್ಟ್‌, ಏನಿದು ಕೇಸ್‌?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment