ಶಿವಮೊಗ್ಗದಲ್ಲಿ ಬೆಳಗಿವ ಜಾವ ಬಸ್‌ ಹತ್ತಿದ ಮಹಿಳೆ, ಸ್ವಲ್ಪ ದೂರ ಹೋದ್ಮೇಲೆ ಕಾದಿತ್ತು ಆಘಾತ

ಶಿವಮೊಗ್ಗ: ಬೆಳಗಿನ ಜಾವ ಬಸ್‌ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ ಬಂಗಾರದ ನೆಕ್ಲೇಸ್‌ (necklace) ಇದ್ದ ಬಾಕ್ಸ್‌ ಕಳ್ಳತನ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕೃತ್ಯ ನಡೆದಿದೆ.

ಭದ್ರಾವತಿಯ ಮುಕ್ತ ಎಂಬುವವರಿಗೆ ಸೇರಿದ ನೆಕ್ಲೇಸ್‌ ಕಳುವಾಗಿದೆ. ಕುಟುಂಬ ಸಹಿತ ಹುಬ್ಬಳ್ಳಿಗೆ ತೆರಳಲು ಬೆಳಗಿನ ಜಾವ 5 ಗಂಟೆಗೆ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಬಸ್‌ ಹತ್ತಿದ್ದರು. ಬಸ್ಸು ಶಿವಮೊಗ್ಗದ ಹೊನ್ನಾಳಿ ರಸ್ತೆಯ ಮೇಲ್ಸೇತುವೆ ಬಳಿ ತೆರಳುವಾಗ, ಮುಕ್ತ ಅವರು ಮಕ್ಕಳಿಗೆ ಕರೆ ಮಾಡಲು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮೊಬೈಲ್‌ಗೆ ತೆಗೆಯಲು ಮುಂದಾದರು. ಆಗ ಜಿಪ್‌ ತೆರೆದಿರುವುದು ಗಮನಕ್ಕೆ ಬಂತು.

ಬ್ಯಾಗ್‌ನ ಒಳಗೆ ಇಟ್ಟಿದ್ದ ಬಂಗಾರದ ನೆಕ್ಲೇಸ್‌ ಇದ್ದ ಬಾಕ್ಸ್‌ ಕಳ್ಳತನವಾಗಿತ್ತು. ಮದುವೆ ಮುಗಿಸಿಕೊಂಡು ಶಿವಮೊಗ್ಗಕ್ಕೆ ಹಿಂತಿರುಗಿದಾಗ ದೂರು ನೀಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KSRTC-Bus-General-Image

ಇದನ್ನೂ ಓದಿ » UPSC 2024 ಫಲಿತಾಂಶ: 1000ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಆಯ್ಕೆ, ಕರ್ನಾಟಕದ ವಿದ್ಯಾರ್ಥಿಗಳ ಭರ್ಜರಿ ಸಾಧನೆ

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
KSRTC-Bus-General-Image-Shimoga-Bangalore

Leave a Comment