ಸುಹಾಸ್‌ ಶೆಟ್ಟಿ ಹತ್ಯೆ, ಶಿವಮೊಗ್ಗ ಜಿಲ್ಲೆಯಲ್ಲಿ ಆಕ್ರೋಶ, ಎಲ್ಲೆಲ್ಲಿ ಪ್ರತಿಭಟನೆಯಾಯ್ತು? ಯಾರೆಲ್ಲ ಏನೆಲ್ಲ ಹೇಳಿದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ (Protest) ನಡೆಯಿತು. ಬಿಜೆಪಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಹತ್ಯೆಯನ್ನು ಖಂಡಿಸಿದರು.

ಎಲ್ಲೆಲ್ಲಿ ಪ್ರತಿಭಟನೆ ನಡೆಯಿತು?

ಶಿವಮೊಗ್ಗ: ಬಿಜೆಪಿ ವತಿಯಿಂದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಸುಹಾಸ್‌ ಶೆಟ್ಟಿಯ ಹತ್ಯೆಗೈದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

bjp protest

ಶಿವಮೊಗ್ಗ: ಶುಕ್ರವಾರ ರಾತ್ರಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ವತಿಯಿಂದ ಶಿವಪ್ಪನಾಯಕ ಪ್ರತಿಮೆ ಮುಂಭಾಗ ಮೌನಾಚರಣೆ ಮಾಡಿ ಪ್ರತಿಭಟನೆ ನಡೆಸಲಾಯಿತು. ಶಾಸಕ ಎಸ್‌.ಎನ್.ಚನ್ನಬಸಪ್ಪ, ವಿ.ಹೆಚ್‌.ಪಿ ಜಿಲ್ಲಾಧ್ಯಕ್ಷ ವಾಸುದೇವ್‌ ಸೇರಿ ಹಲವರು ಭಾಗಿಯಾಗಿದ್ದರು.

VHP-Protest-in-Shimoga

ತೀರ್ಥಹಳ್ಳಿ: ಪಟ್ಟಣದಲ್ಲಿ ಶುಕ್ರವಾರ ಸಂಜೆ ತಾಲೂಕು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಕಾಂಗ್ರಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

thirthahalli protest

ಸುಹಾಸ್‌ ಶೆಟ್ಟಿ ರೌಡಿಶೀಟರ್‌ ಎಂದು ಅಲ್ಲಿನ ಎಸ್‌.ಪಿ ಹೇಳುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಯಾರನ್ನು ಬೇಕಿದ್ದರು ರೌಡಿಶೀಟರ್‌ ಎಂದು ಘೋಷಿಸುತ್ತದೆ. 2017ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 28 ಸಾವಿರ ಹಿಂದೂ ಕಾರ್ಯಕರ್ತರ ವಿರುದ್ಧ ರೌಡಿ ಶೀಟ್‌ ತೆರೆಲಾಗಿದೆ.

– ಆರಗ ಜ್ಞಾನೇಂದ್ರ, ಶಾಸಕ

ಸಾಗರ: ಶಿವಪ್ಪನಾಯಕ ವೃತ್ತದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ, ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ವತಿಯಿಂದ ಪ್ರತಿಭಟಿಸಲಾಯಿತು.

sagara protest

ಹತ್ಯೆ ಮಾಡಿದವರಿಗೆ ಠಾಣೆಯಲ್ಲಿ ರಾಜಾಥಿತ್ಯ ನೀಡುವುದು ಬೇಡ. ಅವರಿಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು. ಹಿಂದೂಗಳ ಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ಪೊಲೀಸರು ಕೈಗೆ ಬಂದೂಕು ಕೊಟ್ಟಿರುವು ಅಲಂಕಾರಕ್ಕಲ್ಲ.

– ಹರತಾಳು ಹಾಲಪ್ಪ, ಮಾಜಿ ಸಚಿವ

ಹೊಳೆಹೊನ್ನೂರು: ಇಲ್ಲಿನ ಅರಹತೊಳಲು ಸರ್ಕಲ್‌ನಲ್ಲಿ ಬಿಜೆಪಿ ಹೊಳೆಹೊನ್ನೂರು ಮಂಡಲದ ವತಿಯಿಂದ ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

Holehonnuru protest

ರಾಜ್ಯದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್‌ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.

– ಎಂ.ಮಲ್ಲೇಶಪ್ಪ, ಬಿಜೆಪಿ ಮಂಡಲ ಅಧ್ಯಕ್ಷ

Arya-PU-College-Shimoga.

ಇದನ್ನೂ ಓದಿ » ಶಿವಮೊಗ್ಗ ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಇವತ್ತು ಯಲ್ಲೋ ಅಲರ್ಟ್‌

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 3, 2025

ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್‌ಗೆ ಕಾದಿತ್ತು ಶಾಕ್‌, ಆಗಿದ್ದೇನು?

ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್‌ಗೆ ಕಾದಿತ್ತು ಶಾಕ್‌, ಆಗಿದ್ದೇನು?

ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್‌ ರಚನೆ, ಯಾರಿಗೆ ಯಾವ ಜವಾಬ್ದಾರಿ?

ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್‌ ರಚನೆ, ಯಾರಿಗೆ ಯಾವ ಜವಾಬ್ದಾರಿ?

ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

ಶಿವಮೊಗ್ಗದ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

ಶಿವಮೊಗ್ಗದ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

ಕಾಳಿಂಗ ಸರ್ಪದ ಕಾರಣಕ್ಕೆ ಅಡಿಕೆ ಲಾರಿ ಪಲ್ಟಿ, ಆಗಿದ್ದೇನು?

ಕಾಳಿಂಗ ಸರ್ಪದ ಕಾರಣಕ್ಕೆ ಅಡಿಕೆ ಲಾರಿ ಪಲ್ಟಿ, ಆಗಿದ್ದೇನು?

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿರುದ್ಧ ಕಾಮೆಂಟ್‌ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿರುದ್ಧ ಕಾಮೆಂಟ್‌ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?

ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಆಗಿದ್ದೇನು?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

ಶಿವಮೊಗ್ಗದ ಮೈಲಾರೇಶ್ವರ ದೇವಸ್ಥಾನದಲ್ಲಿ ನಾಳೆ ವಿಶೇಷ ಧಾರ್ಮಿಕ ಕಾರ್ಯಕ್ರಮ, ಏನೇನಿರುತ್ತೆ?

ಮಾರ್ಚ್‌ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

ಮಾರ್ಚ್‌ 30ರಂದು ಶಿವಮೊಗ್ಗಕ್ಕೆ ಬರ್ತಿದ್ದಾರೆ ಪೇಜಾವರ ಮಠದ ಸ್ವಾಮೀಜಿ

Leave a Comment