ರಾಷ್ಟ್ರಧ್ವಜ ಹಿಡಿದು ಘೋಷಣೆ ಮೊಳಗಿಸುತ್ತ ಶಿವಮೊಗ್ಗದಲ್ಲಿ ಬೀದಿಗಿಳಿದ ಮುಸ್ಲಿಂ ಸಮುದಾಯ, ಹೇಗಿತ್ತು ಮೆರವಣಿಗೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ವಕ್ಫ್‌ ತಿದ್ದುಪಡಿ ಕಾಯ್ದೆ (Act) ತಕ್ಷಣ ರದ್ದುಗೊಳಿಸುವಂತೆ ಆಗ್ರಹಿಸಿ ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್‌ ಲಾ ಬೋರ್ಡ್‌ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಸ್ಲಿಂ ಸಮುದಾಯದ ದೊಡ್ಡ ಸಂಖ್ಯೆಯ ಜನರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಇದನ್ನೂ ಓದಿ » KSRTC ಬಸ್‌ ಹತ್ತಿ ಟಿಕೆಟ್‌ ಮಾಡಿಸಲು ಜೇಬಿಗೆ ಕೈ ಹಾಕಿದ ಶಿವಮೊಗ್ಗದ ವ್ಯಕ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

ಜಿಲ್ಲಾ ವಕ್ಫ್‌ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆಯ ಹೈಲೈಟ್ಸ್‌

  • ಶಿವಮೊಗ್ಗ ಮತ್ತು ಸುತ್ತಮುತ್ತಲ ತಾಲೂಕುಗಳಿಂದ ದೊಡ್ಡ ಸಂಖ್ಯೆಯ ಮುಸ್ಲಿಮರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕಪ್ಪುಪಟ್ಟಿ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 

Protest Against Waqf act amendment

  • ರಾಷ್ಟ್ರಧ್ವಜ ಹಿಡಿದುಕೊಂಡು, ವಕ್ಫ್‌ ಕಾಯ್ದೆ ವಿರುದ್ಧದ ಘೋಷಣೆ ಇರುವ ಫ್ಲೇಕರ್‌ಗಳನ್ನು ಪ್ರದರ್ಶಿಸುತ್ತ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
  • ಮೆರವಣಿಗೆಯಲ್ಲಿ ಸಾವಿರಾರು ಮುಂದಿ ಭಾಗವಹಿಸಿದ್ದರಿಂದ ಕುವೆಂಪು ರಂಗಮಂದಿರ ಮುಂಭಾಗದ ರಸ್ತೆ ಸಂಪೂರ್ಣ ಬಂದ್‌ ಆಗಿತ್ತು.

Arya-PU-College-Shimoga.

  • ಮೆರವಣಿಗೆ ಆರಂಭಕ್ಕು ಮುನ್ನ ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
  • ಪ್ರತಿಭಟನಾ ಮೆರವಣಿಗೆಯ ನಿರ್ವಹಣೆಗೆ ಸಂಘಟನೆಯ ವತಿಯಿಂದ ಸ್ವಯಂ ಸೇವಕರನ್ನು ನಿಯೋಜನೆ ಮಾಡಲಾಗಿತ್ತು.

Protest Against Waqf act amendment

  • ಪ್ರತಿಭಟನಾ ಸಭೆ ಆರಂಭಕ್ಕು ಮುನ್ನ ಪಹಲ್ಗಾಮ್‌ ದಾಳಿಯಲ್ಲಿ ಸಾವನ್ನಪ್ಪಿದರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆ ಓದಲಾಯಿತು.

ಸಭೆಯಲ್ಲಿ ಯಾರೆಲ್ಲ ಏನೆಲ್ಲ ಹೇಳಿದರು?

ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ವಕ್ಫ್‌ ಬೋರ್ಡ್‌ನಲ್ಲಿ ಹಿಂದುಗಳಿರಬೇಕು ಎಂದು ತಿಳಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ. ಇನ್ನು, 20 ಅಥವಾ 30 ವರ್ಷದಿಂದ ವಕ್ಫ್‌ ಆಸ್ತಿ ಬಳಸಿಕೊಳ್ಳುತ್ತಿದ್ದರೆ ಅದು ಅವರದೆ ಸ್ವತ್ತಾಗಲಿದೆ ಎಂದು ತಿದ್ದುಪಡಿ ಮಾಡಲಾಗಿದೆ. ಅಲ್ಲಾಹುವಿನ ಆಸ್ತಿ ಯಾರಿಗು ಸೇರುವುದಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ಮನದಟ್ಟಾಗಬೇಕಿದೆ.

– ಶಾಹುಲ್‌ ಹಮೀದ್‌ ಮುಸ್ಲಿಯಾರ್‌, ಎಸ್‌ವೈಒ ಕಾರ್ಯದರ್ಶಿ

m3

ನಮ್ಮ ದೇಶದ ಗಡಿ ರಕ್ಷಣೆ ಮಾಡಲು ಸಾಧ್ಯವಿಲ್ಲದ ನೀವು ನಮ್ಮ ವಕ್ಫ್‌ ರಕ್ಷಣೆ ಮಾಡುತ್ತೀರಿ ಎಂಬ ನಂಬಿಕೆ ಇಲ್ಲ. ವಕ್ಫ್‌ ಆಸ್ತಿಯನ್ನು‌ ನಾವೆ ರಕ್ಷಣೆ ಮಾಡಿಕೊಳ್ಳುತ್ತೇವೆ. ಆದ್ದರಿಂದ ವಕ್ಫ್‌ ಕಾಯ್ದೆಗೆ ತಂದಿರುವ ತಿದ್ದುಪಡಿ ಹಿಂಪಡೆಯಿರಿ.

– ಮೌಲ್ವಿ ಮುಫ್ತಿ ಅಖ್ವಿಲ್‌ ರಝಾ, ಜಾಮಿಯಾ ಮಸೀದಿ

Protest Against Waqf act amendment

ವಕ್ಫ್ ಆಸ್ತಿಗೂ ಅಮಿತ್ ಷಾಗೂ ಏನು ಸಂಬಂಧ? ವಕ್ಫ್ ಆಸ್ತಿ ಭಗವಂತನಿಗೆ ಸೇರಿದ್ದು. ಅದು ಯಾರ ಒಡೆತನದಲ್ಲಿ ಇರುವುದಿಲ್ಲ. 1953, 1995, 2013ರಲ್ಲಿ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಆಗ ಯಾವುದೇ ಸಮಸ್ಯೆ ಆಗಿರಲಿಲ್ಲ. ಮೋದಿ, ಅಮಿತ್ ಷಾ ಅವಧಿಯಲ್ಲಿ ತಿದ್ದುಪಡಿ ತಂದಾಗ ವಿರೋಧ ವ್ಯಕ್ತವಾಗುತ್ತಿದೆ. ಇವರು ಒಡೆದು ಆಳುವ ನೀತಿ ಮಾಡುತ್ತಿದ್ದಾರೆ.

– ಸುಧೀರ್‌ ಕುಮಾರ್‌ ಮುರೊಳ್ಳಿ, ಎಬಿಸಿಆರ್‌ ರಾಜ್ಯಾಧ್ಯಕ್ಷ

Protest Against Waqf act amendment

ಪ್ರತಿಭಟನಾ ಸಭೆಯ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರಮುಖರು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಮಾರ್ಕಜಿ ಸುನ್ನೀ ಜಮೀಯತ್‌ ಮಸೀದಿಯ ಉಪಾಧ್ಯಕ್ಷ ಮೊಹಮ್ಮದ್‌ ಇರ್ಫಾನ್‌ ಖಾನ್‌, ಸುನ್ನಿ ಜಮಾತ್‌ ಉಲಮಾ ಕಮಿಟಿ ಕಾರ್ಯದರ್ಶಿ ಐಜಾಜ್‌ ಪಾಷಾ, ಮಝಹರ್‌ ಉಲ್‌ ಉಲೂಮ್‌ನ ಮುಫ್ತಿ‌ ಸಯ್ಯದ್ ಮಜೀಬುಲ್ಲಾ, ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಮುಫ್ತಿ ಮೊಹಮ್ಮದ್‌ ಸಫಿಯುಲ್ಲಾ ಖಾಸ್ಮಿ, ಜಮಾತ್‌ ಅಹ್ಲೆ ಹದೀಸ್‌ನ ಶೇಖ್‌ ಅಲಿ, ಜಮಾತ್‌ ಇಸ್ಲಾಮಿ ಹಿಂದ್‌ನ ಶಿವಮೊಗ್ಗದ ಕಾರ್ಯದರ್ಶಿ ಮೌಲಾನಾ ಹಾಮಿದ್‌ ಉಮರಿ, ಮರ್ಕಝ್‌ ಸಆದನ ಪ್ರಾಂಶುಪಾಲ ಮೌಲಾನಾ ಅಬ್ದುಲ್‌ ಜಬ್ಬಾರ್‌ ಸಾದಿ, ವಿಧಾನ ಪರಿಷತ್‌ ಸದಸ್ಯೆ ಬಲ್ಕಿಸ್‌ ಬಾನು ಸೇರಿದಂತೆ ಹಲವರು ಇದ್ದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment